•  
  •  
  •  
  •  
Index   ವಚನ - 425    Search  
 
ಒಲುಮೆಯ ಕೂಟಕ್ಕೆ ಹಾಸಿನ ಹಂಗೇಕೆ? ಬೇಟದ ಮರುಳಗೆ ಲಜ್ಜೆ ಮುನ್ನುಂಟೆ? ನಿಮ್ಮನರಿದ ಶರಣಂಗೆ ಪೂಜೆಯ ಹಂಬಲ, ದಂದುಗವೇಕೆ? ಮಿಸುನಿಯ ಚಿನ್ನಕ್ಕೆ ಒರೆಗಲ್ಲ ಹಂಗೇಕೆ? ಗುಹೇಶ್ವರಲಿಂಗಕ್ಕೆ ಕುರುಹು ಮುನ್ನುಂಟೆ?
Transliteration Olumeya kūṭakke hāsina haṅgēke? Bēṭada maruḷage lajje munnuṇṭe? Nim'manarida śaraṇaṅge pūjeya hambala, dandugavēke? Misuniya cinnakke oregalla haṅgēke? Guhēśvaraliṅgakke kuruhu munnuṇṭe?
Music Courtesy:
Hindi Translation प्यार की भेंट को बिस्तर क्यों ? कामातुर को क्या लज्जा है ? तुम्हें जाने शरण को पूजा की चिंता क्यों ? अपरंजि को कसौटी की चिंता क्यों ? गुहेश्वरलिंग को चिह्न है क्या ? Translated by: Eswara Sharma M and Govindarao B N
Tamil Translation அன்பின் இணைவிற்கு விரிப்பு தேவையோ? காமம் தலைக்கேறியவனுக்கு நாணமுண்டோ? உம்மை அறிந்த சரணனுக்கு பூஜை செய்யும் விருப்பமும், அச்செயலும் எதற்கோ? சொக்கத்தங்கத்திற்கு உரைகல் தேவையோ? குஹேசுவரலிங்கத்திற்கு அடையாளம் உண்டோ? Translated by: Smt. Kalyani Venkataraman, Chennai
ಶಬ್ದಾರ್ಥಗಳು ಒರೆಗೆಲ್ಲ ಹಂಗೇಕೆ? = ಒರೆಗಲ್ಲಿನ ಹಂಗಿಲ್ಲ; ಒಲುಮೆಯ = ಅನುರಾಗದ; ಕುರುಹು ಮುನ್ನುಂಟೆ? = ಕುರುಹು ಎಂಬುದೇ ಇಲ್ಲ; ಕೂಟಕ್ಕೆ = ಸಮಾಗಮಕ್ಕೆ; ದಂದುಗ = ದಂದುಗವಾಗಲಿ ಇಲ್ಲ; ನಿಮ್ಮನರಿದ ಶರಣಂಗೆ = ಶಿವಯೋಗಸಾಧನೆಯಿಂದ ಲಿಂಗವೇ ತಾನೆಂದು ಅರಿತ ಶರಣನಿಗೆ; ಪೂಜೆಯ = ಪೂಜೋಪಚಾರಗಳ; ಬೇಟದ ಮರುಳಿಂಗೆ = ಕಾಮೋನ್ಮತ್ತಳಿಗೆ; ಮಿಸುನಿಯ ಚಿನ್ನಕ್ಕೆ = ಅಪರಂಜಿಗೆ; ಲಜ್ಜೆ ಮುನ್ನುಂಟೆ = ಲಜ್ಜೆಯೇ ಇರದು; ಲಿಂಗಕ್ಕೆ = ಪರವಸ್ತುವಾದ ನಿಷ್ಕಲ ಲಿಂಗಕ್ಕೆ; ಹಂಗೇಕೆ? = ಹಂಗಿಲ್ಲ; ಹಂಬಲ = ಹಂಬಲವಾಗಲಿ; ಹಾಸಿನ = ಹಾಸಿಗೆಯ; Written by: Sri Siddeswara Swamiji, Vijayapura