ಮನಕ್ಕೆ ಮನೋಹರವಾದಡೆ ಮನಕ್ಕೆ ಭಂಗ ನೋಡಾ.
ತನುವಿನಲ್ಲಿ ಸುಖವ ಧರಿಸಿಕೊಂಡಡೆ,
ಆ ತನುವಿಂಗೆ ಕೊರತೆ ನೋಡಾ.
ಅರಿವನರಿದು ಸುಖವಾಯಿತ್ತೆಂದಡೆ,
[ಆ] ಅರಿವಿಂಗೆ ಭಂಗ ನೋಡಾ ಗುಹೇಶ್ವರಾ.
Transliteration Manakke manōharavādaḍe manakke bhaṅga nōḍā.
Tanuvinalli sukhava dharisikoṇḍaḍe,
ā tanuviṅge korate nōḍā.
Arivanaridu sukhavāyittendaḍe,
[ā] ariviṅge bhaṅga nōḍā guhēśvarā.
Hindi Translation मन को मनोहर हो तो मन के लिए भंग है।
तन में सुखधारण करे तो उस तन का भंग देखो।
ज्ञान प्राप्तकर सुख मिलजाये तो,
उस ज्ञान का भंग देखो गुहेश्वरा।
Translated by: Eswara Sharma M and Govindarao B N
Tamil Translation மனத்திற்கு இன்பமளிப்பின் மனத்திற்கே கேடு காணாய்.
உடலிலே இன்பம் சூழின், உடலிற்கே கேடு காணாய்
அறிவை அறிந்து இன்பமாயிற்று எனின்
அந்த அறிவிற்கே கேடு, காணாய் குஹேசுவரனே.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅರಿದು = ಬುದ್ದಿಯಿಂದ ಅವಗ್ರಹಿಸಿ; ಅರಿವನು = ನಿಷ್ಕಲಲಿಂಗದ ಸ್ವರೂಪವನು; ಆ ಅರಿವಿಂಗೆ = ಆ ಬುದ್ದಿಗೆ; ತನುವಿಂಗೆ ಭಂಗ = ಆ ತನುವು ಭಿನ್ನ ತನುವಾಗಿ ಉಳಿಯದೆ ಭಂಗಗೊಳ್ಳುತ್ತದೆ; ತನುಭಾವ ನಷ್ಟವಾಗುತ್ತದೆ; ತನುವಿನಲ್ಲಿ = ಬಾಹ್ಯ ದೇಹದಲ್ಲಿ; ಭಂಗ = ಹಾನಿ; ಲಿಂಗಾನುಭವಕ್ಕೆ ಸ್ವತಂತ್ರವಾಗಿ ಉಳಿಯದು; ಮನಕ್ಕೆ = ಮನಸ್ಸಿಗೆ; ಮನಕ್ಕೆ ಭಂಗ = ಅದು ಮನಸ್ಸನ್ನು ಭಂಗಗೊಳಿಸುತ್ತದೆ.; ಮನೋಹರವಾದಡೆ = ಲಿಂಗಾಂಗಸಮರಸಸುಖವು ಮನವನಲಂಕರಿಸಿದರೆ; ಸುಖವ ಧರಿಸಿಕೊಂಡಡೆ = ಆ ಲಿಂಗಸಮರತಿ ಸುಖವನು ಅಳವಡಿಸಿಕೊಂಡರೆ; ಸುಖವಾಯಿತ್ತು ಎಂದಡೆ = ಲಿಂಗಸುಖವನು ಅನುಭವಿಸಬೇಕು ಎಂದರೆ;
Written by: Sri Siddeswara Swamiji, Vijayapura