•  
  •  
  •  
  •  
Index   ವಚನ - 431    Search  
 
ಊರರಿಂದ ಹೊರಗೊಂದು ದೇಗುಲ ಕಂಡಯ್ಯಾ, ಆ ದೇಗುಲದೊಳಗೊಬ್ಬ ಗೊರತಿ ನೋಡಯ್ಯಾ. ಆ ಗೊರತಿಯ ಕೈಯಲ್ಲಿ ಸೂಜಿ, ಆ ಸೂಜಿಯ ಮೊನೆಯಲ್ಲಿ ಹದಿನಾಲ್ಕು ಲೋಕ ಕಂಡಯ್ಯಾ. ಗೊರತಿಯ ಕೈ ಸೂಜಿಯ, ಹದಿನಾಲ್ಕು ಲೋಕವ, ಒಂದಿರುಹೆ ನುಂಗಿತ್ತ ಕಂಡೆ ಗುಹೇಶ್ವರಾ.
Transliteration Ūrarinda horagondu dēgula kaṇḍayyā, ā dēguladoḷagobba gorati nōḍayyā. Ā goratiya kaiyalli sūji, ā sūjiya moneyalli hadinālku lōka kaṇḍayyā. Goratiya kai sūjiya, hadinālku lōkava, ondiruhe nuṅgitta kaṇḍe guhēśvarā.
English Translation 2 Outside city limits a temple. In the temple, look, a hermit woman. In the woman's hand a needle, at needle's end the fourteen worlds. O Lord of Caves, I saw an ant devour whole the woman, the needle, the fourteen worlds.

Translated by: A K Ramanujan
Book Name: Speaking Of Siva
Publisher: Penguin Books ---------------------

Hindi Translation गाँव के बाहर एक मंदिर , मंदिर में एक ज्ञानी देखो। ज्ञानी के हाथ में सूई , सूई की नोक में चौदह लोक। ज्ञानी, सूई, चौदह लोक एक रहा ज्ञान निगला देव गुहेश्वरा! Translated by: Eswara Sharma M and Govindarao B N
Tamil Translation ஊருக்கு வெளியிலே ஒரு கோயில் கோயிலினுள்ளே ஒரு ஞானசக்தி உள்ளது. காணாய் அவளுடைய கையிலொரு ஊசி! ஊசியின் முனையிலே பதினான்கு உலகம்! ஞான சக்தியை, ஊசியை, பதினான்கு உலகினை தன் இருப்பு விழுங்கியதைக் கண்டேன் குஹேசுவரனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಊರು = ವಿಶ್ವ, ಪಂಚಭೌತಿಕ ವಿಸ್ತಾರ; ಒಂದು ಇರುಹೆ = ತನ್ನ ಮೂಲ ಇರುವಿಕೆಯ ಜ್ಞಾನವು; ಒಂದು ದೇಗುಲ = ಒಂದು ಸುಂದರವಾದ ದೇಹವೆಂಬ ನಿಲಯ; ಒಬ್ಬ ಗೊರತಿ = ಜ್ಞಾನಶಕ್ತಿಯೊಂದಿಗಿನ ಜೀವ(ವಾಸ ಮಾಡಿದ್ದಾನೆ); ಕೈಯಲ್ಲಿ = ಅಧೀನದಲ್ಲಿ; ಗೊರತಿಯ = ಜ್ಞಾನಶಕ್ತಿಯುಕ್ತ ಜೀವನ; ಗೊರತಿಯ = ಜೀವನನ್ನು; ದೇಗುಲದೊಳಗೆ = ಆ ದೇಹದಲ್ಲಿ; ನುಂಗಿತ್ತ ಕಂಡೆ = ನುಂಗಿಹಾಕಿದುದನು ನೋಡಿದೆ; ಮೊನೆಯಲ್ಲಿ = ಕಲ್ಪನಾವಿಲಾಸದಲ್ಲಿ; ಸೂಜಿ = ಅತಿ ಸೂಕ್ಷ್ಮವಾದ ಕರಣ, ಮನಸ್ಸು; ಸೂಜಿಯ = ಆ ಸೂಕ್ಷ್ಮ ಮನಸ್ಸಿನ; ಸೂಜಿಯ = ಮನಸ್ಸನ್ನು; ಹದಿನಾಲ್ಕು ಲೋಕ = ಹದಿನಾಲ್ಕು ಬಗೆಯ ಭಾವನೆಗಳು, ವಿವಿಧ ಭಾವನೆಗಳು; ಹದಿನಾಲ್ಕು ಲೋಕವ = ಹಾಗೂ ಹದಿನಾಲ್ಕು ಬಗೆಯ ಭಾವನೆಗಳನ್ನು; ಹೊರಗೆ = ಆ ವಿಶ್ವಕ್ಕೆ ಭಿನ್ನವಾಗಿ ಕಾಣುವ; Written by: Sri Siddeswara Swamiji, Vijayapura