•  
  •  
  •  
  •  
Index   ವಚನ - 433    Search  
 
ನ' ಎಂಬುದೆ ನಂದಿಯಾಗಿ, 'ಮ' ಎಂಬುದೆ ಮಹತ್ತಾಗಿ, 'ಶಿ' ಎಂಬುದೆ ರುದ್ರನಾಗಿ, 'ವಾ' ಎಂಬುದೆ ಹಂಸೆಯಾಗಿ, 'ಯ' ಎಂಬುದೆ ಅರಿವಾಗಿ 'ಓಮ್'ಕಾರವೆ ಗುರುವಾಗಿ, ಸಂಬಂಧವೆ ಅಸಂಬಂಧವಾಗಿ, ಅಸಂಬಂಧವೆ ಸಂಬಂಧವಾಗಿ, ಎರಡೂ ಒಂದಾಗಿ ಗುಹೇಶ್ವರಲಿಂಗಸಂಬಂಧಿ!
Transliteration Na' embude nandiyāgi, 'ma' embude mahattāgi, 'śi' embude rudranāgi, 'vā' embude hanseyāgi, 'ya' embude arivāgi'ōm'kārave guruvāgi, sambandhave asambandhavāgi, asambandhave sambandhavāgi, eraḍū ondāgi guhēśvaraliṅgasambandhi!
Hindi Translation ’न’ कहे नंदी बनकर ’म’ कहे महत्व बनकर, ’शी’ कहे रुद्र बनकर, ’वा’ कहे हंस बनकर, ’य’ कहे ज्ञान बनकर ’ऊ’ कहे गुरु बनकर, संबंध ही असंबंध बनकर , असंबध ही संबंध बनकर, दोनों एक हो तो गुहेश्वरलिंग संबंधि। Translated by: Eswara Sharma M and Govindarao B N
Tamil Translation “ந” என்பது நந்தியாகி, “ம” என்பது விஷ்ணுவாகி “சி” என்பது உருத்திரனாகி “வா” என்பது ஈசுவரனாகி “ய” என்பது அறிவாகி, “ஓம்” காரமே குருவாகி தொடர்பே தொடர்பற்றதாகி, தொடர்பற்றதே தொடர்புடையதாகி அத்துவைத நிலையிலே, குஹேசுவர லிங்க தொடர்புடையவனன்றோ. Translated by: Smt. Kalyani Venkataraman, Chennai
ಶಬ್ದಾರ್ಥಗಳು ಅರಿವು = ಜ್ಞಾನ, ಅನುಗ್ರಹ ಶಕ್ತಿಯ ಸಂಕೇತ, ಸದಾಶಿವ; ಅಸಂಬಂಧ = ಬಾಹ್ಯ ದೃಷ್ಟಿಯಿಂದ ನೋಡಿದಾಗ ವಿಶ್ವವು ಬೇರೆ, ಪರವಸ್ತುವು ಬೇರೆ; ಅಸಂಬಂಧ; ಎರಡೂ ಒಂದಾಗೆ = ಶಿವಯೋಗಸಾಧನೆಯ ಮೂಲಕ ಶರಣನು ಅದ್ವೈತ ದೃಷ್ಟಿಯನು ಪಡೆಯುತ್ತಾನೆ; ಓಂ = ಇದು ಓಂಕಾರ ಪ್ರಣವ, ಶಿವಷಡಕ್ಷರ ಮಹಾಮಂತ್ರದ ಷಷ್ಟಾಕ್ಷರ; ಗುರು = ಬಂಧನಗಳನ್ನು ಕಳೆದು ಭವಮುಕ್ತರನ್ನಾಗಿಸುವ ನಿರಾಲಂಬಶಕ್ತಿಯ ಸಂಕೇತ, ಮಹೇಶ್ವರ; ನ = ಇದು ನಕಾರ ಪ್ರಣವ, ಶಿವಷಡಕ್ಷರ ಮಹಾಮಂತ್ರದ ಮೊದಲಕ್ಷರ; ನಂದಿ = ವಿಶ್ವದಲಿ ಕಾಣಬರುವ ಸೃಜನಶಕ್ತಿಯ ಸಂಕೇತ, ಬ್ರಹ್ಮ; ಮ = ಇದು ಮಕಾರ ಪ್ರಣವ, ಶಿವಷಡಕ್ಷರ ಮಹಾಮಂತ್ರದ ದ್ವಿತೀಯಾಕ್ಷರ; ಮಹತ್ತು = ವ್ಯಾಪಕತೆಯ ದರ್ಶಕ, ವಿಶ್ವಪೋಷಣ ಶಕ್ತಿಯ ಸಂಕೇತ, ವಿಷ್ಣು; ಯ = ಇದು ಯಕಾರ ಪ್ರಣವ, ಶಿವಷಡಕ್ಷರ ಮಹಾಮಂತ್ರದ ಪಂಚಮಾಕ್ಷರ; ರುದ್ರ = ವಿಷಯಶಕ್ತಿರ ಸಂಕೇತ, ರುದ್ರ; ಲಿಂಗಸಂಬಂಧಿ = ಅವನೇ ಲಿಂಗಸಂಬಂಧಿಯು; ವಾ = ಇದು ವಕಾರ ಪ್ರಣವ, ಶಿವಷಡಕ್ಷರ ಮಹಾಮಂತ್ರದ ಚತುರ್ಥಾಕ್ಷರ; ಶಿ = ಇದು ಶಿಕಾರ ಪ್ರಣವ, ಶಿವಷಡಕ್ಷರ ಮಹಾಮಂತ್ರದ ತೃತೀಯಾಕ್ಷರ; ಸಂಬಂಧ = ತಾತ್ವಿಕ ದೃಷ್ಟಿಯಿಂದ ನೋಡಿದಾಗ ಪರವಸ್ತುವಿಗೂ ಈ ವಿಶ್ವಕ್ಕೂ ಅವಿನಾಭಾವಸಂಬಂಧ; ಹಂಸೆ = ಸೃಷ್ಟಿ, ಸ್ಥಿತಿ, ಲಯಗಳಿಗೆ ಒಳಗಾಗದ ತಿರೋಧಾನ(ಪುನಃ ಸೃಷ್ಟಿ ನಿರ್ಮಾಣ) ಶಕ್ತಿಯ ಸಂಕೇತ, ಈಶ್ವರ; Written by: Sri Siddeswara Swamiji, Vijayapura