ಜಗದಗಲದ ಮಂಟಪಕ್ಕೆ, ಮುಗಿಲಗಲದ ಮೇಲುಕಟ್ಟಿನಲ್ಲಿ
ಚಿತ್ರ [ವಿಚಿತ್ರ] ವ ನೋಡುತ್ತ ನೋಡುತ್ತ,
ಧ್ಯಾನವಿಶ್ರಾಮದಲ್ಲಿ ದಿಟದಿಟವೆಂಬುದೊಂದು
ದರುಶನವ ನೋಡುತ್ತ ನೋಡುತ್ತ,
ಗಗನಗಂಭೀರದಲ್ಲಿ ಉದಯವಾಯಿತ್ತ ಕಂಡೆ!
ಗುಹೇಶ್ವರನೆಂಬ ಲಿಂಗವು ತಾನೆಯಾಗಿ.
Transliteration Jagadagalada maṇṭapakke, mugilagalada mēlukaṭṭinalli
citra [vicitra] va nōḍutta nōḍutta,
dhyānaviśrāmadalli diṭadiṭavembudondu
daruśanava nōḍutta nōḍutta,
gaganagambhīradalli udayavāyitta kaṇḍe!
Guhēśvaranemba liṅgavu tāneyāgi.
Hindi Translation जगत विस्तार वितान को आकाश विस्तार का चाँदोवा में
चित्र विचित्र देखते देखते ,
ध्यान विश्राम में सत्य सत्य जैसे एक
दर्शन देखते देखते,
गगनगंभीरमेंउदयहुआदेखा
गुहेश्वर लिंग स्वयं होकर!
Translated by: Eswara Sharma M and Govindarao B N
Tamil Translation உலககல மண்டபத்திற்கு வானகல விதானமாம்
வகைவகையான தத்துவங்களைக் கண்டு, கண்டு
தியானத்தின் மோனத்திலே, உண்மைக்கே உண்மையான
ஒரு மெய்ப்பொருளின் தரிசனத்தைக் கண்டு, கண்டு
பேரமைதியான உன்மனி நிலையில் குஹேசுவரனே தான் எனும்
பேதமற்ற ஞானம் அரும்பியதன்றோ.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಲ್ಲಿ = ಅದರಲ್ಲಿ, ಆ ಮಂಟಪದಲ್ಲಿ, ಕ್ರಿಯಾಶಕ್ತಿಯ ರಚನೆಯಲ್ಲಿ(ಇರುವ); ಉದಯವಾಯಿತ್ತು = ಆ ಪರಶಿವನೆ, ನಿಷ್ಕಲಲಿಂಗವೆ-ತಾನು ಎಂಬ ಅಭೇದಜ್ಞಾನ ಚಂದ್ರಮ ಉದಿಸಿತ್ತು; ಎಂಬುದೊಂದು ದರ್ಶನವ = ಈ ಶಿವ ಮತ್ತು ಶಕ್ತಿಗಳಿಗೆ ಪರಮ ಆಧಾರವಾದ ಪರಶಿವನ, ನಿಷ್ಕಲಲಿಂಗದ ಮಹಾದರ್ಶನವನು; ಗಗನ ಗಂಭೀರದಲ್ಲಿ = ಮಹಾಮೌನ ಉನ್ಮನಿ ಅವಸ್ಥೆಯಲಿ; ಗುಹೇಶ್ವರಲಿಂಗವು = ಆ ನಿಷ್ಕಲಲಿಂಗವು; ಚಿತ್ರವಿಚಿತ್ರವ = ವೈವಿಧ್ಯಪೂರ್ಣವಾದ, ಚಿತ್ರವಿಚಿತ್ರವಾದ ತತ್ತ್ವಗಳನ್ನು, ಶುದ್ದ ಅಶುದ್ದ ಮಿಶ್ರ-ಎಂಬ
ಎಲ್ಲ ತತ್ವ್ತಗಳನ್ನು, ಆ ತತ್ವ್ತಗಳ; ಜಗದಗಲದ = ಜಗತ್ತಿನಷ್ಟು ವಿಸ್ತಾರವಾದ; ತಾನೆಯಾಗಿ = ತನ್ನ ಸ್ವರೂಪವೆ ಆಗಿ ಅನುಭವಕ್ಕೆ ಬಂದಿತು, ಶರಣನಿಗೆ; ದಿಟದಿಟ = ಸತ್ಯಕ್ಕೆ ಸತ್ಯವಾದ, ಶಿವ-ಶಕ್ತಿ ಸಂಪುಟಕ್ಕೆಯೂ ಹಿಂದಿರುವ ಪರಶಿವ; ಧ್ಯಾನ ವಿಶ್ರಾಮದಲ್ಲಿ = ಶರಣನ ಮನಸ್ಸು ಧ್ಯಾನದಲ್ಲಿ ವಿಶ್ರಮಿಸಿದಾಗ, ಉನ್ಮನಗೊಂಡಾಗ, ಮನಸ್ಸು ಶಿವಾಯತ್ತವಾದಾಗ; ನೋಡುತ್ತ ನೋಡುತ್ತ = ಶಿವ-ಶಕ್ತಿಮಯವೆಂದೇ ನೋಡುತ್ತ ನೋಡುತ್ತ ಆ ಅದ್ಭುತ ನೋಟದಲ್ಲಿ ತಲ್ಲೀನನಾಗುತ್ತಾನೆ, ಶರಣ; ನೋಡುತ್ತ ನೋಡುತ್ತ = ನೋಡುವಲ್ಲಿ ಶರಣನು ತನ್ಮಯನಾಗುತ್ತಾನೆ, ಆ ನಿಷ್ಕಲಲಿಂಗದಲ್ಲಿ ಮುಳುಗಿಹೋಗುತ್ತಾನೆ; ಮಂಟಪಕ್ಕೆ = ಕ್ರಿಯಾಶಕ್ತಿಯ ರಚನೆಗೆ, ಆ ರಚನೆಯಾದ ಮಹದ್ವಿಶ್ವಕ್ಕೆ; ಮುಗಿಲಗಲದ = ಆಕಾಶದಷ್ಟು ಹರವಾದ; ಮೇಲುಕಟ್ಟು = ಮೇಲು ಹೊದಿಕೆ, ಚಿದಾಕಾಶರೂಪ ಶಿವತತ್ತ್ವ;
Written by: Sri Siddeswara Swamiji, Vijayapura