•  
  •  
  •  
  •  
Index   ವಚನ - 44    Search  
 
ತೋಟವ ಬಿತ್ತಿದರೆಮ್ಮವರು, ಕಾಹ ಕೊಟ್ಟರು ಜವನವರು. ನಿತ್ಯವಲ್ಲದ ಸಂಸಾರ ವೃಥಾ ಹೋಯಿತಲ್ಲಾ! ಗುಹೇಶ್ವರನಿಕ್ಕಿದ ಕಿಚ್ಚು, ಹೊತ್ತಿಕ್ಕಲುಂಟು ಅಟ್ಟುಣಲಿಲ್ಲ.
Transliteration Tōṭava bittidarem'mavaru, kāha koṭṭaru javanavaru. Nityavallada sansāra vr̥thā hōyitallā! Guhēśvaranikkida kiccu, hottikkaluṇṭu aṭṭuṇalilla.
Hindi Translation बगीचे लगाये हमारे लोग; पहरेदार जवन लोग; अनित्य संसार वृथा चला गया। गुहेश्वर से लगी आग प्रज्वलित तो हुई भोजन न बना। Translated by: Eswara Sharma M and Govindarao B N
Tamil Translation தோட்டத்தில் விதைத்தனர் எம்மவர், காலமும் கர்மமும் காவல் புரிந்தனர், நிலையற்ற வாழ்வு பயனற்றுப் போயிற்று! குஹேசுவரன் இட்ட தீ பற்றவில்லை. அட்டுண்ணவில்லை! Translated by: Smt. Kalyani Venkataraman, Chennai
ಶಬ್ದಾರ್ಥಗಳು ಎಮ್ಮವರು = ಸರ್ವಮೂಲರಾದ ಶಿವ ಮತ್ತು ಶಕ್ತಿ; ಕಾಹಕೊಡು = ಕಾವಲುಮಾಡು, ಅಂಕಿತಕ್ಕೆ ತೆಗೆದುಕೊಳ್ಳು; ಜವನವರು = ಕಾಲ ಮತ್ತು ಕರ್ಮ; ನಿರ್ಮಾಣಗೊಂಡ ಎಲ್ಲವನ್ನೂ ಕಬಳಿಸುವ ಎರಡು ಶಕ್ತಿಗಳು; Written by: Sri Siddeswara Swamiji, Vijayapura