•  
  •  
  •  
  •  
Index   ವಚನ - 441    Search  
 
ಇಂದು ಸಾವ ಹೆಂಡತಿಗೆ, ನಾಳೆ ಸಾವ ಗಂಡನವ್ವಾ! ಗಳಿಗೆಗಳಿಗೆಗೆ ಮಗು ಹುಟ್ಟಿ ಕೈ ಬಾಯ್ಗೆ ಬಂದಿತ್ತವ್ವಾ! ಅರಿವು ಕುರುಹನು ಮರವೆ ನುಂಗಿತ್ತು; ಗುಹೇಶ್ವರನುಳಿದನವ್ವಾ!
Transliteration Indu sāva heṇḍatige, nāḷe sāva gaṇḍanavvā! Gaḷigegaḷigege magu huṭṭi kai bāyge bandittavvā! Arivu kuruhanu marave nuṅgittu; guhēśvaranuḷidanavvā!
Music Courtesy:
Hindi Translation आज मरनेवाली पत्नि को कल मरनेवाला पति दॆखो माँ। क्षण क्षण पर बच्चा पैदा होकर हाथ मुँहपर आया देखो माँ। ज्ञान चिह्न को अज्ञान निगला; गुहेश्वर बचा दॆखो माँ! Translated by: Eswara Sharma M and Govindarao B N
Tamil Translation இன்று மடியும் மனைவிக்கு நாளை மடியும் கணவன் காணாய்! கணந்தோறும் குழந்தை பிறந்து, வளர்ந்து நின்றது காணாய்! அறிவையும், உடலையும் மறதி விழுங்கியது! குஹேசுவரன் எஞ்சினன் காணாய்! Translated by: Smt. Kalyani Venkataraman, Chennai
ಶಬ್ದಾರ್ಥಗಳು ಅರಿವು ಕುರುಹನು = ಜ್ಞಾನಾಂಶನಾದ ಜೀವನನ್ನು ಹಾಗೂ ಸಾಕಾರವಾದ ದೇಹವನ್ನು; ಜೀವಭಾವವನ್ನು ಹಾಗೂ ದೇಹ ಅಭಿಮಾನವನ್ನು; ಇಂದು = ಇದೇ ಜನ್ಮದಲ್ಲಿ; ಕೈಗೆ ಬಾಯಿಗೆ ಬಂದಿತ್ = ಬೆಳೆದು ನಿಂತಿತು, ಪಕ್ವವಾಯಿತು; ಗಂಡ = ಪತಿ, ಜೀವ; ಗಳಿಗೆ ಗಳಿಗೆಗೆ = ಕ್ಷಣಕ್ಷಣಕ್ಕೂ, ನಿರಂತರವಾಗಿ(ನಡೆವ ಆತ್ಮ ಚಿಂತನೆಯ ಫಲವಾಗಿ); ನಾಳೆ = ಅಜ್ಞಾನ ನಾಶವಾದ ನಂತರ; ನುಂಗಿತ್ತು = ಆ ಮಹಾಪ್ರಜ್ಞೆಯು ದೇಹ ಭಾವವನ್ನು, ಜೀವಭಾವವನ್ನು ನುಂಗಿಹಾಕಿತು; ಮಗು = ಶಿಶು, ಆತ್ಮಜ್ಞಾನ-ಶಿವಜ್ಞಾನವು; ಮರವೆ = ಶಿವೋsಹಂ ಎಂಬ ಮಹಾಪ್ರಜ್ಞೆ. ಆ ಪ್ರಜ್ಞೆಯುದಿಸಿದಾಗ ಆತ್ಮಭಿನ್ನವಾದ ವಿಶ್ವವೆಲ್ಲ ಮರೆಯಾಗುವುದರಿಂದ ಅದಕ್ಕೆ ಮರವೆ ಎನ್ನಲ; ಸಾವ = ಸಾಯುವ; ಸಾವ = ಸಾಯುವ; ಹುಟ್ಟಿ = ಉದಿಸಿ; ಹೆಂಡತಿಗೆ = ಸತಿಗೆ, ದೇಹಕ್ಕೆ; Written by: Sri Siddeswara Swamiji, Vijayapura