ಮರುಳುಂಡ ಮನುಷ್ಯನ ಇರವಿನ ಪರಿಯಂತೆ,
ವಿವರವನರಿಯಬಾರದು ನೋಡಾ, ಶಿವಜ್ಞಾನ.
ಅದನರಿದೆಹೆನರಿದೆಹೆನೆಂದು ನೆನೆಯ ಹೋದರೆ,
ಅದು ಮುಂದುದೋರದು.
ಮರೆದೆಹೆನೆಂದು ಭಾವಿಸ ಹೋದಡೆ ತೆರಹುಗೊಡದು!
ಗುಹೇಶ್ವರಾ, ನಿಮ್ಮ ನೆರೆ ಅರಿದ ಶರಣರು,
ನಿಸ್ಸೀಮಸುಖಿಗಳು ನೋಡಾ.
Transliteration Maruḷuṇḍa manuṣyana iravina pariyante,
vivaravanariyabāradu nōḍā, śivajñāna.
Adanaridehenaridehenendu neneya hōdare,
adu mundudōradu.
Maredehenendu bhāvisa hōdaḍe terahugoḍadu!
Guhēśvarā, nim'ma nere arida śaraṇaru,
nis'sīmasukhigaḷu nōḍā.
Hindi Translation उन्मत्त आदमी की स्थिति जैसे
शिव ज्ञान का ब्योरा नहीं जानना देखो!
उसे जाना समझकर आगे बढे तो आगे नहीं दिखा ता,
भूल समझा तो अवकाश नहीं देता!
गुहेश्वरा, तुम्हारी स्थिति जाने शरण
निस्सीम सुखी है देखो।
Translated by: Eswara Sharma M and Govindarao B N
Tamil Translation மருளை நல்கும் போதைப் பொருளை உண்ட
மனிதனின் நிலையைப் போன்று
சிவஞானமெனும் மருந்தை உண்டவனின் நிலையை
அறியவியலுமோ? சிவஞானத்தின் பெருமையாம்
அதனை உணர்ந்துளேனென்று, அதை நினையின்
அவ்விதம் செய்யவியலாது. மறந்துளேன்
என அதனை மறக்க வேண்டும் எனக் கருதின்
அவ்வாய்ப்பு ஏற்படுவதில்லை. குஹேசுவரனே.
உம்மை முற்றிலுமணர்ந்த சரணர் எல்லையற்ற
பேரின்ப வடிவினரன்றோ!
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅದನು = ಆ ಶಿವಜ್ಞಾನವನ್ನು ; ಅದು ಮುಂದುದೋರದು = ಅದು ಅವಗತವಾಗದು; ಅರಿವ ಕ್ರಿಯೆಗಾಗಲಿ, ನೆನೆವ ಕ್ರಿಯೆಗಾಗಲಿ ಅದು ವಿಷಯವಾಗದು; ಅರಿದೆಹೆನು ಎಂದು = ಅರಿತಿದ್ದೇನೆ ಎಂದು ತಿಳಿದು; ಇರವಿನ = ಇರುವಿಕೆಯ; ತೆರಹುಗೊಡದು = ಅದಕ್ಕೆ ಅವಕಾಶ ದೊರೆಯದು; ನಿಮ್ಮ = ಶಿವನನ್ನು; ನಿಸ್ಸೀಮ ಸುಖಿಗಳು = ಅಖಂಡ ಆನಂದಸ್ವರೂಪಿಗಳು; ನೆನೆಯಹೋದಡೆ = ಸ್ಮರಿಸಿಕೊಳ್ಳಲು ಯತ್ನಿಸಿದರೆ; ನೆರೆಯರಿದ = ಪೂರ್ಣವಾಗಿ ಅರಿತ, ಅನುಭಾವಯೋಗದಿಂದ ಅರಿತ, ಸಾಕ್ಷಾತ್ಕರಿಸಿಕೊಂಡ.; ಪರಿಯಂತೆ = ರೀತಿಯಂತೆ(ಶಿವಜ್ಞಾನವೆಂಬ ದಿವ್ಯ ಮದ್ದನ್ನುಂಡ ಶರಣನ ಇರವಿನ ಪರಿ); ಭಾವಿಸಿಹೋದಡೆ = ಭಾವಿಸಿಕೊಳ್ಳಲು ಪ್ರಯತ್ನಿಸಿದರೆ; ಮನುಷ್ಯನ = ವ್ಯಕ್ತಿಯ; ಮರುಳುಂಡ = ಮರುಳುಗೊಳಿಸುವ ಮದ್ದ ಸೇವಿಸಿದ; ಮರೆದೆಹೆನು ಎಂದು = ನಾನು ಮರೆತಿದ್ದೇನೆ ಎಂದು ತಿಳಿದು, ಮರೆಯಬೇಕು ಎಂದು ಉದ್ದೇಶಿಸಿ; ವಿವರವನರಿಯಬಾರದು = ಆ ವ್ಯಕ್ತಿಯ ಹಾಗೂ ಶರಣನ ನಿಲವನ್ನು ಅರಿಯಲಿಕ್ಕಾಗದು(ಏಕೆಂದರೆ, ಅದು) ; ಶರಣರು = ಮಹಾನುಭಾವರು; ಶಿವಜ್ಞಾನ = ಶಿವಜ್ಞಾನದ ಮಹಿಮೆ;
Written by: Sri Siddeswara Swamiji, Vijayapura