ಸುಳಿಯ ಬಲ್ಲಡೆ ಸುಳುಹೆ ಲೇಸಯ್ಯಾ.
ಗಮನವಿಲ್ಲದೆ ಸುಳಿಯ ಬಲ್ಲಡೆ,
ನಿರ್ಗಮನಿಯಾಗಿ ನಿಲ್ಲಬಲ್ಲಡೆ,
ಅದಕ್ಕದೆ ಪರಿಣಾಮ, ಅದಕ್ಕದೆ ಸಂತೋಷ.
ಗುಹೇಶ್ವರಲಿಂಗದಲ್ಲಿ ಅವರ ಜಗದಾರಾಧ್ಯರೆಂಬೆ.
Transliteration Suḷiya ballaḍe suḷuhe lēsayyā.
Gamanavillade suḷiya ballaḍe,
nirgamaniyāgi nillaballaḍe,
adakkade pariṇāma, adakkade santōṣa.
Guhēśvaraliṅgadalli avara jagadārādhyarembe.
Hindi Translation घूमने हो तो लोक हितार्थ घूमना अच्छा है।
बिना गमन घूमना हो तो, निर्गमनी होकर खडे हो तो,
उसका वहीं परिणाम उसका वहीं संतोष।
गुहेश्वर लिंग में उनको जगदाराध्या कहूँगा।
Translated by: Eswara Sharma M and Govindarao B N
Tamil Translation சிவானுபவத்துடன் வாழவியன்றால், அது நன்று
புலனின்பங்களை நாடாது வாழவியன்றால்
பிணைப்பற்றவனாகி இருக்கவியன்றால்
அவனுக்கும் அது நிறைவு, உலகினருக்கு மகிழ்ச்சி
குஹேசுவரலிங்கத்துடன் இணைந்த அவரை
உலகினர் வணங்கத் தக்கவர் என இயம்புவேன்.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅದಕ್ಕೆ = ಆ ಸಂಚಚರಿಸುವುದಕ್ಕೂ ನಿಲ್ಲುವುದಕ್ಕೂ; ಅದೆ ಪರಿಣಾಮ = ಒಂದೇ ಪರಿಣಾಮ, ಪರಿತೃಪ್ತಿ; ಅದೆ ಸಂತೋಷ = ಒಂದೇ ಸಂತೋಷ, ಆನಂದ; ಅವರ = ಆ ಈರ್ವರೂ ಚರ-ಸ್ಥಿರ ಶರಣರನ್ನು; ಗಮನವಿಲ್ಲದೆ = ವಿಷಯಗಳತ್ತ ಮನವು ಹರಿಯದೆ, ವಿಷಯರಾಗವಿರದೆ; ಗುಹೇಶ್ವರಲಿಂಗದಲ್ಲಿ = ಪರಮಾತ್ಮನಲ್ಲಿ ಒಂದಾದ; ಜಗದಾರಾಧ್ಯರೆಂಬೆ = ಸಕಲ ಲೋಕಕ್ಕೆಲ್ಲ ಪೂಜ್ಯರು ಎಂದು ಭಾವಿಸುತ್ತೇನೆ; ನಿರ್ಗಮನಿಯಾಗಿ = ಯಾವುದಕ್ಕೂ ಅಂಟಿಕೊಳ್ಳದೆ ನಿರ್ಲಿಪ್ತನಾಗಿ; ನಿಲಬಲ್ಲಡೆ = ಒಂದು ಕಡೆ ಸ್ಥಿರವಾಗಿ ನಿಲ್ಲುವುದಾದರೆ; ಲೇಸಯ್ಯಾ = ಲೋಕಕ್ಕೆ ಹಿತವಾದುದು; ಸುಳಿಯಬಲ್ಲಡೆ = ಅನುಭಾವಿಯಾಗಿ ಲೋಕದವರ ಮಧ್ಯೆ ಸುಳಿಯುವುದಾದರೆ; ಸುಳಿಯಬಲ್ಲಡೆ = ಸುಳಿಯುವುದಾದರೆ, ಸಂಚರಿಸುವುದಾದರೆ; ಸುಳುಹೆ = ಆ ಸಂಚಾರವೆ;
Written by: Sri Siddeswara Swamiji, Vijayapura