•  
  •  
  •  
  •  
Index   ವಚನ - 446    Search  
 
ಪರಮತತ್ತ್ವದೊಳಗಿರಬಲ್ಲಡೆ, ಉಣಲಾಗದು ಉಣದಿರಲಾಗದು. ಎಲ್ಲರ ಸಂಗದಲ್ಲಿರಲಾಗದು, ಬೇರೆ ಮತ್ತೊಬ್ಬನೆ ಇರಲಾಗದು. ತಾಯಿ ಸತ್ತ ಅರುದಿಂಗಳಿಗೆ ತಾ ಹುಟ್ಟಿದ, ಮೂಲ ಗುಹೇಶ್ವರ.
Transliteration Paramatattvadoḷagiraballaḍe, uṇalāgadu uṇadiralāgadu. Ellara saṅgadalliralāgadu, bēre mattobbane iralāgadu. Tāyi satta arudiṅgaḷige tā huṭṭida, mūla guhēśvara.
Hindi Translation परतत्व में रहे तो भोग नहीं करना है, बिना भोग नहीं रहना है। सबके संग में नहीं रहना है, और अकेले भी नहीं रहना है। माँ मरे छः महिने में पैदा हुआ गुहेश्वरा। Translated by: Eswara Sharma M and Govindarao B N
Tamil Translation பேரின்பத்தைத் துய்க்க வேண்டும் எனின் உண்ணற்க, உண்ணாதிருக்கவும் இயலாது அனைவருடனும் கூடி இருக்கவியலாது. தனிமையில் ஒருவனாகவும் இருக்கவியலாது. தாய்மடிந்த ஆறு திங்களில் தான் தோன்றிய மூல தத்துவத்தில் நிலைத்து நிற்பான் குஹேசுவரனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಅದರೊಳಗಿರಬಲ್ಲಡೆ = ಆ ಪರಮ ಸತ್ಯವಸ್ತುವೆ ತಾನಾಗಿ ಇರಬಲ್ಲವ ಶರಣ. ಅಂತಹ ಶರಣನ ವರ್ತನೆ ಹೇಗಿರಬೇಕು, ಹೇಗಿದ್ದೀತು?; ಅರುದಿಂಗಳಿಗೆ = ಆರು ತಿಂಗಳಿಗೆ, ಆರು ಘಟ್ಟಗಳಿಂದ ಕೂಡಿದ ಷಟ್ ಸ್ಥಲ ಶಿವಯೋಗಸಾಧನೆ ಪೂರ್ಣವಾದಾಗ; ಉಣದಿರಲಾಗದು = ಉಪಭೋಗಿಸದೆಯೂ ಇರಬಾರದು; ಉಣಲಾಗದು = ವಿಷಯಗಳನ್ನು ಉಪಭೋಗಿಸಬಾರದು; ಎಲ್ಲರ ಸಂಗದಲ್ಲಿರಲಾಗ = ಲೋಕದವರ ಸಾಂಸಾರಿಕ ಸಂಗದಲ್ಲಿ ಇರಬಾರದು; ತಾ = ಆ ಷಟ್ ಸ್ಥಲವನೇರಿದ ಸಾಧಕನು; ತಾಯಿ = ಜೀವಾತ್ಮನ ಉದಯಕ್ಕೆ ಕಾರಣವಾದ ಆತ್ಮಜ್ಞಾನ, ಅವಿದ್ಯಾ.; ಪರತತ್ವ್ತ = ಅಂತಿಮಸತ್ಯ, ಪರಮಚೈತನ್ಯ; ಬೇರೆ ಮತ್ತೊಬ್ಬನೆ ಇರ = ಲೋಕವನೇ ಬಿಟ್ಟು ಬೇರೆ ಎಲ್ಲೋ ಏಕಾಂತದಲ್ಲಿ ಒಬ್ಬೊಂಟಿಗನಾಗಿಯೂ ಇರಬಾರದು; ಸತ್ತ = ಇಲ್ಲವಾದ(ಮೇಲೆ); ಹುಟ್ಟಿದ ಮೂಲ = ಎಲ್ಲಿಂದ ತಾ ತೋರಿಬಂದನೋ ಅಂಥ ಪರತತ್ವ್ತವು ಅವನ ಮೂಲ(ಅಲ್ಲಿ ಆತ ನೆಲೆಸುತ್ತಾನೆ, ಅವನೇ ಶರಣ); Written by: Sri Siddeswara Swamiji, Vijayapura