ತಾ ನಡೆವಡೆ ನಡೆಗೆಟ್ಟ ನಡೆಯ ನಡೆವುದಯ್ಯಾ.
ತಾ ನುಡಿವಡೆ ನುಡಿಗೆಟ್ಟು ನುಡಿಯ ನುಡಿವುದಯ್ಯಾ.
ರೂಹಿಲ್ಲದ ಸಂಗವ ಮಾಡಬೇಕು,
ಭವವಿಲ್ಲದ ಭಕ್ತಿಯ ಮಾಡಬೇಕು.
ತಾನಾವನೆಂದರಿಯದಂತಿಹುದು, ಗುಹೇಶ್ವರಾ.
Transliteration Tā naḍevaḍe naḍegeṭṭa naḍeya naḍevudayyā.
Tā nuḍivaḍe nuḍigeṭṭu nuḍiya nuḍivudayyā.
Rūhillada saṅgava māḍabēku,
bhavavillada bhaktiya māḍabēku.
Tānāvanendariyadantihudu, guhēśvarā.
Hindi Translation तुम्हें चलना हो तो अच्छा चलना चाहिए।
तुम्हें बोलना हो तो अच्छा बोलना चाहिए।
बिना स्वार्थ संग करना चाहिए।
भव रहित भक्ति करनी चाहिए।
बिना दंभ रहना चाहिए गुहेश्वरा।
Translated by: Eswara Sharma M and Govindarao B N
Tamil Translation தான் நடப்பின் நடைகெட்ட நடையை நடக்க வேண்டும்
தான் கூறின் செருக்கற்ற சொல்லைக் கூற வேண்டும்
உலகியல் சாராத தொடர்பைக் கொள்ள வேண்டும்
பிறவியற்ற பக்தியை மேற்கொள்ள வேண்டும்
தான் யாரென்பதை அறியாதிருக்க வேண்டும் குஹேசுவரனே.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಎಂದು ಅರಿಯದಂತಿಹುದು = ಎಂಬುದನು ಅರಿಯದಂತೆ ಇರುವುದು; ತಾ ನಡೆವಡೆ = ತಾನು ನಡೆಯುವುದಾದರೆ; ತಾನು ಆವನು = ತಾನು ಯಾರು? ; ನುಡಿಗೆಟ್ಟ = ಮೊದಲಿನಂತೆ ಛಲ-ಮದಗಳಿಂದ ಕೂಡಿದ ನುಡಿಯ ನುಡಿಯದೆ; ನುಡಿಯ = ಮಧುರ ನುಡಿಯ; ನುಡಿಯ ಬೇಕು = ನುಡಿಯಬೇಕು(ನುಡಿಯುತ್ತಾನೆ, ಶರಣ); ಮಾಡಬೇಕು = ಗೈಯಬೇಕು(ಮಾಡುತ್ತಾನೆ, ಶರಣ); ರೂಹಿಲ್ಲದ = ಯಾವುದೇ ಲೌಕಿಕ ಉದ್ದೇಶವಿಲ್ಲದ, ಸ್ವಾರ್ಥಸಾಧಕವಲ್ಲದ; ಸಂಗವ = ಸಂಗವನ್ನು;
Written by: Sri Siddeswara Swamiji, Vijayapura