•  
  •  
  •  
  •  
Index   ವಚನ - 450    Search  
 
ಕಣ್ಣೆ ಕಟ್ಟಿಗೆಯಾಗಿ, ಕೈಯೆ ಕರ್ಪರವಾಗಿ, ಕಿವಿಯೆ ಸಕಲಪುರಾತನರ ಕಾರುಣ್ಯವೆನುತ, ಮನದ ಭಿಕ್ಷವನುಂಡು, ತನು ಪರಿಣಾಮವನೆಯ್ದಿಹ ಘನಮಹಿಮರ ತೋರಯ್ಯಾ ಗುಹೇಶ್ವರಾ.
Transliteration Kaṇṇe kaṭṭigeyāgi, kaiye karparavāgi, kiviye sakalapurātanara kāruṇyavenuta, manada bhikṣavanuṇḍu, tanu pariṇāmavaneydiha ghanamahimara tōrayyā guhēśvarā.
English Translation 2 Show me, O Guhēsvara, The Glorious Ones Whose eye and hand are as The beggar's staff and bowl; Whose ear is as the Grace of The Ancient Saints; Who have attained fulfilment of the body By partaking of the alms of the Mind!
Hindi Translation आँखे ही काष्ट बनकर, हाथ कपाल बनकर , करण सकल पुरातनों का कारुण्य बनकर , मन का प्रसाद खाकर, तनु तृप्त हुआ , घन महिमा को दिखाओ गुहेश्वरा। Translated by: Eswara Sharma M and Govindarao B N
Tamil Translation கண்ணே தண்டமாக கையே கப்பரையாக செவியே பழையோர்தம் அனுபவ அமுதமாக மனத்தின் பிட்சயையுண்டு, உடல் நிறைவடைந்துள்ள பெருமைசால் பெரியோரைக் காட்டுவாய் குஹேசுவரனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಕಟ್ಟಿಗೆಯಾಗಿ = ಧರ್ಮದಂಡವಾಗಿದೆಯೋ, ಸ್ಥಿರವಾಗಿದೆಯೋ; ಕಣ್ಣೆ = ಯಾರ ದೃಷ್ಟಿಯು; ಕಪ್ಪರವಾಗಿ = ಪಾತ್ರೆಯಾಗಿದೆಯೋ, ಲಿಂಗಸ್ಥಲವಾಗಿದೆಯೋ; ಕಾರುಣ್ಯವೆನುತ = ಅನುಭವಾಮೃತವೆಂಬ ಕಾರುಣ್ಯರಸವ ಗ್ರಹಿಸಿದೆಯೋ; ಕಿವಿಯೆ = ಯಾರ ಕಿವಿಯು; ಕೈಯೆ = ಯಾರ ಹಸ್ತವು; ಘನಮಹಿಮರ = ಶರಣರ; ತನು ಪರಿಣಾಮವನೆಯ್ದಿಹ = ಯಾರ ದೇಹವು ತೃಪ್ತಿಭಾವನೆಯಿಂದ ತುಂಬಿದೆಯೋ, ಅಂಥ; ತೋರಾ = ತೋರಿಸು; ಪುರಾತನರ = ಅನುಭಾವಿಗಳ; ಮನದ ಭಿಕ್ಷವನುಂಡು = ಯಾರು ತಮ್ಮ ಇಚ್ಚಿತ ಆನಂದ ಭಿಕ್ಷಾ-ಪ್ರಸಾದವನು ಉಂಡಿರುವರೋ; ಸಕಲ = ಎಲ್ಲ; Written by: Sri Siddeswara Swamiji, Vijayapura