•  
  •  
  •  
  •  
Index   ವಚನ - 451    Search  
 
ಕಂಗಳ ಕರುಳ ಕೊಯ್ದವರ, ಮನದ ತಿರುಳ ಹುರಿದವರ, ಮಾತಿನ ಮೊದಲ ಬಲ್ಲವರ, ಎನಗೊಮ್ಮೆ ತೋರಾ ಗುಹೇಶ್ವರಾ.
Transliteration Kaṅgaḷa karuḷa koydavara, manada tiruḷa huridavara, mātina modala ballavara, enagom'me tōrā guhēśvarā.
English Translation 2 Show me once the men who have cut the guts of the eye roasted the kernels of the heart and learned the beginnings of the word O Lord of Caves.

Translated by: A K Ramanujan
Book Name: Speaking Of Siva
Publisher: Penguin Books ---------------------

Hindi Translation आँखों की आँत काटे, मन के भाव भूले बात का मूल जाननेवाले मुझे एक बार दिखा दो गुहेश्वरा। Translated by: Eswara Sharma M and Govindarao B N
Tamil Translation கண்களிலுள்ள மாயையைக் கொய்தவரை மனத்தின் உலகியல் பற்றை எரித்தவரை சொல்லின் மூலத்தை உணர்ந்தவரை ஒருமுறை எனக்குக் காட்டுவாய் குஹேசுவரனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಎನಗೊಮ್ಮೆ ತೋರಾ = ತೋರಿಸು ಎನಗೆ; ಕಂಗಳ = ಕಣ್ಣುಗಳಲ್ಲಿರುವ; ಕರುಳ = ವಿಷಯಮೋಹ-ಮಾಯೆಯನ್ನು, ಭೇದ ದೃಷ್ಟಿಯನ್ನು; ಕೊಯ್ದವರ = ಕೊಯ್ದುಹಾಕಿದವರನ್ನು, ನಷ್ಟಗೊಳಿಸಿದವರನ್ನು; ತಿರುಳ = ವಾಸನೆಗಳನ್ನು, ಪ್ರಾಪಂಚಿಕವಾದ ಒಲವುಗಳನ್ನು; ಬಲ್ಲವರನು = ಅನುಭಾವದಿಂದ ಅರಿತ ಶರಣರನ್ನು; ಮನದ = ಮನಸ್ಸಿನ; ಮಾತಿನ = ನುಡಿಯ; ಮೊದಲ = ಮೂಲವಾದ ಮಹಾಲಿಂಗವನು; ಹುರಿದವರ = ಹುರಿದುಹಾಕಿದವರನ್ನು; Written by: Sri Siddeswara Swamiji, Vijayapura