ವಚನ - 452     
 
ಆದಿಪುರ ವೇದಪುರ ಹಿಮಪುರ ಖಂಡಿತ ಅಖಂಡಿತ- ಶಿವಶಿವಾ ಗಗನವ ಮನ ನುಂಗಿತ್ತು. ಆದಿ ವೇದವ ನುಂಗಿ, ವೇದ ಸ್ವಯಂಭುವ ನುಂಗಿ, ಕಾಲ ಕರ್ಮ ಹಿಂಗಿತ್ತು, ಗುಹೇಶ್ವರಾ ನಿಮ್ಮ ಶರಣಂಗೆ.