ಪೂರ್ವಬೀಜವು ಬ್ರಹ್ಮಚರ್ಯವೆ?
ಅರಿವು ತಾ ಬ್ರಹ್ಮಚರ್ಯವೆ?
ಜ್ಞಾನಾಜ್ಞಾನದುದಯ ತಾ ಬ್ರಹ್ಮಚರ್ಯವೆ?
ಗುಹೇಶ್ವರಾ ನಿಮ್ಮ ಶರಣರ
ಪರಿಣಾಮವೆ ಬ್ರಹ್ಮಚರ್ಯವು.
Art
Manuscript
Music Courtesy:
Video
TransliterationPūrvabījavu brahmacaryave?
Arivu tā brahmacaryave?
Jñānājñānadudaya tā brahmacaryave?
Guhēśvarā nim'ma śaraṇara
pariṇāmave brahmacaryavu.
Hindi Translationक्या पूर्व बीज ब्रह्मचर्य है? क्या ज्ञान खुद ब्रह्मचर्य है ?
क्या ज्ञानाज्ञान उदय खुद ब्रह्म्चर्य है ?
गुहेश्वरा, तुम्हारे शरणों का परिणाम ही ब्रह्मचर्य है|
Translated by: Eswara Sharma M and Govindarao B N
English Translation
Tamil Translationதூல உடல் பிரம்மசரியமோ? அறிவு பிரம்மசரியமோ?
ஞான, அஞ்ஞானத்திற்குக் காரணமானது பிரம்மசரியமோ?
குஹேசுவரனே, உம் சரணரின்
பேரின்ப நிலையே பிரம்ம சரியமன்றோ!
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶರಣಸ್ಥಲ
ಶಬ್ದಾರ್ಥಗಳುಅರಿವು = ಐಂದ್ರಿಯಿಕ ಸಂವೇಧನೆಗಳನ್ನು ಗ್ರಹಿಸುವ, ಅರಿವ ಮನಸ್ಸು; ಜ್ಞಾನಾ ಜ್ಞಾನದುದಯ = ವಸ್ತುವಿನ ಜ್ಞಾನಕ್ಕೂ ಅಜ್ಞಾನಕ್ಕೂ ಕಾರಣವಾದ ಬುದ್ದಿ; ಪರಿಣಾಮ = ಲಿಂಗಾಂಗಸಾಮರಸ್ಯದಿಂದ ಉಂಟಾಗುವ ಆನಂದದ ಸ್ಥಿತಿ, ಆತ್ಮದ ಕೇವಲ ಸ್ವರೂಪ, ಕೈವಲ್ಯ; ಪೂರ್ವಬೀಜ = ಸ್ಥೂಲದೇಹ; ಬ್ರಹ್ಮಚರ್ಯ = ನಿರ್ವಿಕಾರ ಸ್ಥಿತಿ; ಬ್ರಹ್ಮಚರ್ಯ = ನಿಶ್ಚಲತೆ; ಬ್ರಹ್ಮಚರ್ಯ = ನಿರ್ಮಲತೆ; ಬ್ರಹ್ಮಚರ್ಯ = ಅಖಂಡ ಬ್ರಹ್ಮಸ್ಥಿತಿ, ಕೇವಲ ಆತ್ಮಾಸ್ತಿತ್ವ; Written by: Sri Siddeswara Swamiji, Vijayapura