ಒಂದು ಇಲ್ಲದ ಬಿಂದುವ, ತಂದೆಯಿಲ್ಲದ ಕಂದನ,
ಮಾತೆ ಇಲ್ಲದ ಜಾತನ, ಗಮನವಿಲ್ಲದ ಗಮ್ಯನ,
ಮೂವರರಿಯದ ಮುಗ್ಧನ ಠಾವ ತೋರಿಸಾ
ಗುಹೇಶ್ವರ ಲಿಂಗದಲ್ಲಿ ಸಂಗನಬಸವಣ್ಣಾ.
Transliteration Ondu illada binduva, tandeyillada kandana,
māte illada jātana, gamanavillada gamyana,
mūvarariyada mugdhana ṭhāva tōrisā
guhēśvara liṅgadalli saṅganabasavaṇṇā.
Hindi Translation बिना एक बिंदु को , बिना बाप बेटे को,
बिना माँ जात को, बिना गमन गम्य को,
तीनों को न समझे मुग्ध की स्थिति दिखाओ
गुहेश्वर लिंग में संगनबसवण्ण |
Translated by: Eswara Sharma M and Govindarao B N
Tamil Translation எதுவும் அற்ற பிந்துவை, தந்தையற்ற மகனை
தாயற்ற பிள்ளையை சலனமற்ற இறுதி இலட்சியத்தை
மூவரறியா தூயோனை, சரணனைக் காட்டி
அருள்வாய் குஹேசுவரனே.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಇಲ್ಲದ = ಇಲ್ಲದಿರುವ ಸತ್ಯವೇ; ಒಂದು = ಒಂದೂ, ಯಾವುದೂ; ಕಂದ = ವಿಶುದ್ದ ಚೇತನ, ಸ್ವಯಂಭು; ಗಮನ = ಚಲನ; ಗಮ್ಯ = ಅಂತಿಮ ತತ್ತ್ವ.; ಜಾತ = ಇರುವವ; ಠಾವ ತೋರಿಸು = ಆ ಶರಣನ ನೆಲೆಯನ್ನು ತೋರಿಸು; ತಂದೆ ಇಲ್ಲದ = ಆ ಪರಮ ಶಿವನು; ಬಿಂದು = ಪರಮ ಶಿವ; ಮಾತೆ ಇಲ್ಲದ = ಬೇರೊಂದು ಆಶ್ರಯ ತತ್ವ್ತವಿಲ್ಲದ.; ಮುಗ್ದ = ಅಂಥ ಅವನು ಮುಗ್ದ, ನಿರಾಳ; ಮೂವರರಿಯದ = ಸೃಷ್ಟಿಯ ಈಚೆ ಕಾಣಬಂದ ಬ್ರಹ್ಮ, ವಿಷ್ಣು, ರುದ್ರ ಇವರು ಅವನನ್ನು ಅರಿಯರು.
ಜ್ಞಾನೇಂದ್ರಿಯಗಳು ಅವನನ್ನು ನೋಡಲು ಅಸಮರ್ಥ.;
Written by: Sri Siddeswara Swamiji, Vijayapura