•  
  •  
  •  
  •  
Index   ವಚನ - 462    Search  
 
ಜ್ಯೋತಿ ಕಂಡಾ, ಇರಲು ಕತ್ತಲೆ ಕಂಡಾ! ನಿಧಾನ ಕಂಡಾ, ಇರಲು ಬಡತನ ಕಂಡಾ! ಪ್ರಸಾದ ಕಂಡಾ, ಕೊಂಡಡೆ ಪ್ರಳಯ ಕಂಡಾ! ಗುಹೇಶ್ವರ ಕಂಡಾ, ಇದು ಭ್ರಾಂತು ಕಂಡಾ!
Transliteration Jyōti kaṇḍā, iralu kattale kaṇḍā! Nidhāna kaṇḍā, iralu baḍatana kaṇḍā! Prasāda kaṇḍā, koṇḍaḍe praḷaya kaṇḍā! Guhēśvara kaṇḍā, idu bhrāntu kaṇḍā!
Hindi Translation ज्योति देखी ,रहा अंधेरा देखा! निधान देखा, रही गरीबी देखी! प्रसाद देखा , देखे तो प्रलय देखा! गुहेश्वर को देखा, यह भ्रांत देखो! Translated by: Eswara Sharma M and Govindarao B N
Tamil Translation பேரொளியைக் காண்பாய், நீ காண்பது இருளன்றோ! புதையலைக் காண்பாய், வறுமையிலுள்ளாயன்றோ! பிரசாதத்தைக் காண்பாய், ஏற்றும் பிணைப்பிலுளாயன்றோ! குஹேசுவரனைக் காண்பாய், இது மருளென்று உணர்வாய்! Translated by: Smt. Kalyani Venkataraman, Chennai
ಶಬ್ದಾರ್ಥಗಳು ಇದು ಭ್ರಾಂತು = ಈ ಭ್ರಾಂತಿಮಯ ಸಂಸಾರ; ಇರಲು = ನಿನಗಿರುವುದು ಮಾತ್ರ; ಕಂಡಾ = ನೋಡು!; ಕತ್ತಲೆ = ಅಂಧಕಾರ, ದೇವನು ಇಲ್ಲವೆಂಬ ಭಾವ, ದೇವನ ಅಸ್ತಿತ್ವವು ಕಾಣದೆ ಇರುವುದು; ಕೊಂಡಡೆ = ಪ್ರಸಾದರೂಪವಾಗಿರುವ ಶಬ್ದಾದಿಗಳು ಅನುಭವಿಸಿಯೂ; ಜ್ಯೋತಿ = ಬೆಳಕು, ಶಿವನ ಅಸ್ತಿತ್ವ, ಸದ್ರೂಪು; ನಿಧಾನ = ಸಿರಿ, ಶಿವಜ್ಞಾನವೆಂಬ ಸಂಪದ; ಪ್ರಳಯ = ದುಃಖ ಮತ್ತು ಮರಣ; ಪ್ರಸಾದ = ಅರ್ಪಿತ ಪದಾರ್ಥ, ಶಿವನ ಕರುಣೆ, ಪರಮ ಆನಂದ; ಬಡತನ = ದಾರಿದ್ರ್ಯ, ಶಿವಜ್ಞಾನವಿಲ್ಲದಿರುವುದು, ನಾನು ಸಾಮಾನ್ಯ ಜೀವ ಎಂಬ ಅಲ್ಪತೆಯ ಭಾವ; Written by: Sri Siddeswara Swamiji, Vijayapura