•  
  •  
  •  
  •  
Index   ವಚನ - 463    Search  
 
ಜಲದೊಳಗೆ ಹುಟ್ಟಿ ನೆಲದೊಳಗೆ ಹುದುಗಿರ್ದುದ, ಕೆಲಬಲದೊಳಗಿರ್ದವರೆಲ್ಲಾ ಬಲ್ಲರೆ? ಗಾಳಿಯೊಳಗಿಪ್ಪ ಜ್ಯೋತಿ ಕೆಡದೆ ಇದ್ದುದ ಕಂಡು, ನಾನು ಬೆರಗಾದೆ! ಬಾಲಕ್ರೀಡೆಯೊಳಗಾಡುತ್ತಿಪ್ಪ ನಾರಿಯ ಮಕ್ಕಳೈವರು, ಆರೂ ಕಾಣದ ಬಾವಿಯೊಳಗೆ ಬಿದ್ದಿರಲು, ಬೇರೆ ಮತ್ತೆ ಜ್ಞಾನವೆಲ್ಲಿಯದೊ? ಗುಹೇಶ್ವರಾ, ನಿಮ್ಮನರಿಯದ, ಬರಿಯರಿವಿನ ಹಿರಿಯರ ಕಂಡಡೆ, ನಾನು ನಾಚುವೆನಯ್ಯಾ.
Transliteration Jaladoḷage huṭṭi neladoḷage hudugirduda, kelabaladoḷagirdavarellā ballare? Gāḷiyoḷagippa jyōti keḍade idduda kaṇḍu, nānu beragāde! Bālakrīḍeyoḷagāḍuttippa nāriya makkaḷaivaru, ārū kāṇada bāviyoḷage biddiralu, bēre matte jñānavelliyado? Guhēśvarā, nim'manariyada, bariyarivina hiriyara kaṇḍaḍe, nānu nācuvenayyā.
Hindi Translation जल में पैदा होकर, धरती में छिपे हुए को क्या आस पास के लोग जानते हैं ? हवा में रही न बुझी ज्योति देखकर मैं चकित हुआ! बालक्रीडा में नारी के पाँच बच्चे खेल रहे हैं। अनजान कुऎ में गिर गये, और दूसरा ज्ञान कहाँ ? गुहेश्वरा, तुह्में न जाने सिर्फ खाली ज्ञानी बुजुर्ग देखे तो मैं लजा गया। Translated by: Eswara Sharma M and Govindarao B N
Tamil Translation நீரிலே தோன்றி நிலத்திலே மறைந்துள்ளதை உலகினர் உணர்வரோ? காற்றிலுள்ள சுடர் அணையா திருந்ததைக் கண்டு நான் வியப்பெய்தினேன்! பயனின்றி ஆடிய பெண்ணின் ஐந்து குழந்தைகள் எவருமறியாத கிணற்றில் வீழ்ந்திருக்க ஞானம் எங்கிருந்து வரும்? குஹேசுவரனே, உம்மையறியாத பகட்டுப் பெரியோரைக் காணின் நான் நாணுவேன். Translated by: Smt. Kalyani Venkataraman, Chennai
ಶಬ್ದಾರ್ಥಗಳು ಆರೂ ಕಾಣದ ಬಾವಿ = ಯಾರೂ ಅದರ ಆಳವನು ಅರಿಯರು; ಅಷ್ಟು ಆಳವಾದ ಬಾವಿ, ಸಂಸಾರ, ಮೋಹಕೂಪ.; ಇರು = ಉರಿಯುತ್ತ ಇರು, ಹೊಳೆಯುತ್ತ ಇರು, ಶಾಶ್ವತವಾಗಿ ಇರು; ಕೆಡು = ಆರು, ಇಲ್ಲದಾಗು; ಕೆಲಬಲದೊಳಗಿದ್ದವರು = ನೆರೆಹೊರೆಯವರು, ಲೋಕದವರು; ಗಾಳಿ = ಹರಿವ ವಾಯು, ಕಾಲಪ್ರವಾಹ; ಜಲ = ನೀರು, ಚಲನಶೀಲವಾದ ಮನಸ್ಸು; ಜ್ಯೋತಿ = ಉರಿವ ದೀಪ, ಜ್ಞಾನಜ್ಯೋತಿಯಾದ ಆತ್ಮ(ಜೀವಾತ್ಮನ ಮೂಲಸ್ವರೂಪ), ಶಿವನ ಜ್ಞಾನಾಂಶ.; ನಾಚುವೆನು = ಅಂಥವರನ್ನು ಕಂಡು ಅಲ್ಲಮರು ಮೆಚ್ಚರು; ನಾರಿ = ವೈಷ್ವಿಕ ಸೃಜನಶಕ್ತಿ, ಮಾಯೆ, ಪ್ರಕೃತಿ; ನೆಲ = ಜಡಭೌತಿಕ ಸ್ಥೂಲದೇಹ; ಬರಿಯರಿವಿನ ಹಿರಿಯರು = ಕೇವಲ ಶಾಬ್ದಿಕ ಶಾಸ್ತ್ರಜ್ಞಾನವುಳ್ಳ ವಿದ್ವಾಂಸರು, ನಿತ್ಯವಲ್ಲದ ಲೌಕಿಕಪ್ರಪಂಚದ ಜ್ಞಾನಿಗಳು ಅನುಭಾವಿಗಳಲ್ಲದಿದ್ದರೂ ಅನ; ಬಾಲಕ್ರೀಡೆ = ಮಕ್ಕಳು ಆಡುವ ಆಟ, ನಿಶ್ಚಿತ ಉದ್ದೇಶವಿಲ್ಲದೆ ಪರಿಣಾಮಗಳತ್ತ ಗಮನವಿಲ್ಲದೆ ಆಡುವ ಕ್ರೀಡೆ, ಅಲ್ಪಸುಖಕ್ಕಾಗಿ ಮಾಡುವ ಐಂದ್ರ; ಮಕ್ಕಳು ಐವರು = ಆ ಪ್ರಕೃತಿಯ ಮಕ್ಕಳು ಐದು ಜನ-ಶ್ರೋತ್ರ, ತ್ವಚ, ನೇತ್ರ, ರಸನ, ನಾಸಿಕ; ಮತ್ತೆ ಬೇರೆ ಜ್ಞಾನ = ಆ ಸಾಂಸಾರಿಕ ವಲಯ ಬಿಟ್ಟು ಬೇರೆಯಾದ ಆತ್ಮಜ್ಞಾನ, ಜೀವಾತ್ಮನ ಮೂಲಜ್ಞಾನ; ಹುಟ್ಟು = ತೋರಿಬರು, ವ್ಯಕ್ತವಾಗು; ಹುದುಗಿರು = ಅಡಗಿರು, ನೆಲೆಸು, ವಾಸಿಸು; Written by: Sri Siddeswara Swamiji, Vijayapura