ಹಳ್ಳದೊಳಗೊಂದು ಹುಳ್ಳಿ ಬರುತ್ತಿರಲು,
ನೊರೆ ತೆರೆಗಳು ತಾಗದಿಪ್ಪವೆ?
ಸಂಸಾರವೆಂಬ ಸಾಗರದೊಳಗೆ
ಮುಳುಗಾಡುತ್ತಿಪ್ಪ ಪ್ರಾಣಿಗಳಿಗೆ
ಸುಖದುಃಖಗಳು ತಾಗದಿಪ್ಪವೆ?
ಇದು ಕಾರಣ ಮೂರ್ತಿಯಾದುದಕ್ಕೆ
ಪ್ರಳಯ ತಪ್ಪದು ಕಾಣಾ ಗುಹೇಶ್ವರಾ.
Transliteration Haḷḷadoḷagondu huḷḷi baruttiralu,
nore teregaḷu tāgadippave?
Sansāravemba sāgaradoḷage
muḷugāḍuttippa prāṇigaḷige
sukhaduḥkhagaḷu tāgadippave?
Idu kāraṇa mūrtiyādudakke
praḷaya tappadu kāṇā guhēśvarā.
English Translation 2 The froth and foam of a flowing stream
Must touch the floating driftwood.
The pain and pleasure of the world's ocean
Must touch the creatures that sink or swim.
How can he that has taken a form
Not perish, O Guheśvara?
Hindi Translation नाले में एक काष्ट आ रहा तो,
झाग-लहरें ठकराये।
परिवार रूपी सागर में
सुख दुःख टकराये।
इसके लिए यह साक्षी होने के कारण
प्रलय हुआ गुहेश्वरा।
Translated by: Eswara Sharma M and Govindarao B N
Tamil Translation நீர்த்துறையிலொரு கட்டை மிதக்கும் பொழுது
நுரையும் அலைகளும் தாக்கியதன்றோ!
வாழ்க்கை எனும் கடலினுள்ளே
இன்பமும் துன்பங்களும் தாக்கியதன்றோ!
இதற்கு இது குறியாக இருப்பதால்
பிரளயமாயிற்று குஹேசுவரனே.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಇದಕ್ಕೆ = ಜೀವನಿಗೆ.; ಇದು = ಸಂಸಾರವು; ಮೂರ್ತಿಯಾದ ಕಾರಣ = ಧ್ಯೇಯವಾದ ಕಾರಣ;
Written by: Sri Siddeswara Swamiji, Vijayapura