ಆದಿಯಾಧಾರ ತನುಗುಣವುಳ್ಳನ್ನಕ್ಕರ ಸಮತೆಯೆಂಬುದೇನೊ?
ಕಾಲಕಲ್ಪಿತ ಉಪಾಧಿಯುಳ್ಳನ್ನಕ್ಕರ ಶೀಲವೆಂಬುದು ಭಂಗ.
ಕಾಮವೆಂಬುದರ ಬೆಂಬಳಿಯ ಕೂಸಿನ ಹುಸಿಯೆ
ತಾನೆಂದು ತಿಳಿಯದನ್ನಕ್ಕರ,
ಗುಹೇಶ್ವರಾ ನಿಮ್ಮ ನಾಮಕ್ಕೆ ನಾಚದವರನೇನೆಂಬೆನು?
Transliteration Ādiyādhāra tanuguṇavuḷḷannakkara samateyembudēno?
Kālakalpita upādhiyuḷḷannakkara śīlavembudu bhaṅga.
Kāmavembudara bembaḷiya kūsina husiye
tānendu tiḷiyadannakkara,
guhēśvarā nim'ma nāmakke nācadavaranēnembenu?
Hindi Translation आदियाधार तनु गुण रहने तक
समता कैसे ?
काल कल्पित उपाधी रहने तक
शील कैसे ?
काम का पीछा करता देह झूठ
खुद समझने तक ?
गुहेश्वरा, तुम्हारे नाम से न लजानेवाले को क्या कहूँ?
Translated by: Eswara Sharma M and Govindarao B N
Tamil Translation இறைவனை உடலுணர்வு உள்ளவரை உணரவியலுமோ?
வரையறையுள்ள உலகியல் தொடர்பு உள்ளவரை
தூய ஆன்மாவை உணரவியலுமோ?
காமத்தால் ஏற்பட்ட உடலும் தானும்
அறியும்வரை குஹேசுவரனை உணரவியலுமோ?
Translated by: Smt. Kalyani Venkataraman, Chennai
ಶಬ್ದಾರ್ಥಗಳು ಆದಿಯಾಧಾರ = ಜೀವನ ವ್ಯವಹಾರಗಳಿಗೆಲ್ಲ ಮುಖ್ಯ ಆಶ್ರಯವಾದುದು; ಉಪಾಧಿ = ಸಂಸಾರ, ಸಾಂಸಾರಿಕ ಸಂಬಂಧಗಳು, ಸಾಂಸಾರಿಕ ಭಾವನೆಗಳು; ಉಳ್ಳನ್ನಕ್ಕರ = ಅವೆಲ್ಲ ತನ್ನವುಗಳೇ ಎಂದು ಭಾವಿಸಿರುವವರೆಗೆ; ಉಳ್ಳನ್ನಕ್ಕರ = ಮನದಲ್ಲಿ ತುಂಬಿಕೊಂಡಿರುವವರೆಗೆ; ಕಾಮ = ವಿಷಯಾಸಕ್ತಿ; ಕಾಲಕಲ್ಪಿತ = ಕಾಲಸೀಮಿತ, ಕಾಲರೂಪಿತ; ಕೂಸು = ದೇಹ; ತನುಗುಣ = ಸ್ಥೂಲ, ಸೂಕ್ಷ್ಮ ತನುಗಳಲ್ಲಿ ಕಾಣಬರುವ ಎಲ್ಲ ಬಗೆಯ ಗುಣಗಳು; ಬೆಂಬಳಿಯ = ಅನುಸರಿಸಿ ಬರುವ, ಉಂಟಾಗುವ; ಭಂಗ = ಆ ಶುದ್ದಸ್ಥಿತಿಯ ಅನುಭವ ಅಳವಡದು; ಶೀಲ = ಆತ್ಮನ ಶುದ್ದಸ್ಥಿತಿ; ಸಮತೆ = ಭೇದಭಾವವಿಲ್ಲದಿರುವ ಶಿವಸ್ಥಿತಿ; ಹುಸಿ = ಅಸ್ಥಿರ, ತೋರಿಕೆ ಮಾತ್ರ.;
Written by: Sri Siddeswara Swamiji, Vijayapura