•  
  •  
  •  
  •  
Index   ವಚನ - 48    Search  
 
ಮಾನವ ತೋರಿಹ ಆವಿಂಗೆ ಕೊಳಗದ ತೋರಿಹ ಕೆಚ್ಚಲು. ತಾಳಮರದುದ್ದಿಹವೆರಡು ಕೋಡು ನೋಡಾ! ಆದನರಸ ಹೋಗಿ ಆರುದಿನ, ಅದು ಕೆಟ್ಟು ಮೂರುದಿನ! ಅಘಟಿತ ಘಟಿತ ಗುಹೇಶ್ವರಾ, ಅರಸುವ ಬಾರೈ.
Transliteration Mānava tōriha āviṅge koḷagada tōriha keccalu. Tāḷamaraduddihaveraḍu kōḍu nōḍā! Ādanarasa hōgi ārudina, adu keṭṭu mūrudina! Aghaṭita ghaṭita guhēśvarā, arasuva bārai.
English Translation 2 A pint-size cow with a gallon-size udder, And twin horns, palmyra-high! Search it for six days, it has vanished in three... Let's then, O Guheśvara, Seek Him, Him only To Whom all things impossible are possible.
Hindi Translation छोटी सी गाय का बड़ा थन है; उसके दो सींग तालवृक्ष जैसे लंबे थे देखो । उसे ढूँढतेछः दिन ; बिगडेतीनदिन । अघटित घटित गुहेश्वरा, आकर ढूँढो । Translated by: Eswara Sharma M and Govindarao B N
Tamil Translation சிறிய வடிவான பசுவிற்கு பெரிய அளவுள்ள மடியாம் பனை மர உயரத்திற்கு இரு கொம்புகள் காணாய்! அதனைத் தேடிச் சென்றனன் ஆறு நாட்கள் வாழ்வு கெட்டது மூன்று நாட்களில் இணையற்ற குஹேசுவரனிடம் தேடலாம், வாராய்! Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಘಟಿತ ಘಟಿತ = ಅಸಾಧ್ಯದ ಸಿದ್ದಿ.; ಆರು ದಿನ = ಗಂಧ, ರಸ, ರೂಪ, ಸ್ಪರ್ಶ, ಶಬ್ದ ಮತ್ತು ವಾಸನೆ ಎಂಬ ಆರು ಕ್ಷೇತ್ರಗಳು; ಈ ಒಂದೊಂದರಲ್ಲು ಜೀವನು ಕ್ರಮಕ್ರಮವಾಗಿ ನಿತ್ಯತೃ; ಕೆಟ್ಟು = ಆ ಬದುಕೆಲ್ಲ ಹಾಳಾಗಿ.; ಕೊಳಗ = ಬಹುದೊಡ್ಡ ಆಕಾರದ ಮಾಪು(ಅಳತೆ); ಮಾನ = ಚಿಕ್ಕ ಆಕಾರದ ಮಾಪು; ಮೂರು ದಿನ = ಜೀವನದ ಮೂರು ಕಾಲಖಂಡ; ಬಾಲ್ಯ, ಯೌವನ ಮತ್ತು ವಾರ್ಧಕ್ಯ; ಹುಟ್ಟಿನಿಂದ ಸಾವಿನವರೆಗೆ; ಜೀವನಾದ್ಯಂತ; Written by: Sri Siddeswara Swamiji, Vijayapura