ಗಗನದ ಮೇಘಂಗಳು ಸುರಿದಲ್ಲಿ
ಒಂದು ಹಿರಿಯ ಕೆರೆ ತುಂಬಿತ್ತು.
ಆ ಕೆರೆಗೆ ಏರಿ ಮೂರು,
ಅಲ್ಲಿ ಒಳಗೆ ಹತ್ತು ಬಾವಿ, ಹೊರಗೆ ಐದು ಬಾವಿ!
ಆ ಏರಿಯೊಳಗೆ ಒಂಬತ್ತು ತೂಬನುಚ್ಚಿದಡೆ
ಆಕಾಶವೆಲ್ಲ ಜಲಮಯವಾಗಿತ್ತು!
ತುಂಬಿದ ಜಲವನುಂಡುಂಡು ಬಂದು
ಅಂಜದೆ ನುಡಿವ ಭಂಡಯೋಗಿಗಳನೇನೆಂಬೆ ಗುಹೇಶ್ವರಾ.
Transliteration Gaganada mēghaṅgaḷu suridalli
ondu hiriya kere tumbittu.
Ā kerege ēri mūru,
alli oḷage hattu bāvi, horage aidu bāvi!
Ā ēriyoḷage ombattu tūbanuccidaḍe
ākāśavella jalamayavāgittu!
Tumbida jalavanuṇḍuṇḍu bandu
an̄jade nuḍiva bhaṇḍayōgigaḷanēnembe guhēśvarā.
Hindi Translation गगन के बादल बरसे तो एक बड़ा तालाब भरा था।
इस तालाब की तीन मेंडे ;
वहाँ अंदर दस कुऐ, बाहर पाँच कुऐ ।
उस मेंड में नौ रंध्र खोले तो
सारा आसमान जलमय हुआ।
भरे जल को खा खाकर आये
बिना भय बोले निर्लज्ज योगियों को
क्या कहूँ गुहेश्वरा ?
Translated by: Eswara Sharma M and Govindarao B N
Tamil Translation ஆகாய மேகங்களின் பொழிவிலே ஒரு பெரிய
நீர்நிலை நிறைந்தது. அதற்கு மூன்று ஏரிகள்.
அதனுள்ளே பத்து வாவி, வெளியிலே ஐந்து வாவி,
அந்த ஏரியில் ஒன்பது மதகுகள். அவற்றைத் திறந்தால்
ஆகாயம் முழுவதும் நீர் மயமாயிற்று!
நிறைந்த நீரை அருந்தி அருந்தி வந்து
அஞ்சாது கூறும் பகட்டு யோகிகளை என்னென்பேன் குஹேசுவரனே.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಂಜದೆ = ಹಿಂದೆ ಮುಂದೆ ನೋಡದೆ; ಅಲ್ಲಿ ಒಳಗೆ = ಆ ತ್ರಿವಿಧ ದೇಹದ ಒಳಗಡೆಯಲ್ಲಿ ; ಆಕಾಶ = ಅಂತರಂಗ; ಉಂಡುಂಡು = ಸವಿದು ಸವಿದು; ಉಚ್ಚು-ಉರ್ಚು = ತೆರೆ; ಏರಿ ಮೂರು = ಮೂರು ಒಡ್ಡುಗಳು; ಸ್ಥೂಲ, ಸೂಕ್ಷ್ಮ ಕಾರಣ ಎಂಬ ಮೂರು ದೇಹಗಳು; ಐದು ಬಾವಿ = ಪಂಚಕರ್ಮೇಂದ್ರಿಯಗಳೆಂಬ ಬಾವಿಗಳು; ವಚನ, ಗ್ರಹಣ, ಗಮನ, ವಿಸರ್ಜನ ಮತ್ತು ಪ್ರಜನನ-ಎಂಬ ಐದು ಕ್ರಿಯಾ ವರ್ತನಗಳು; ಒಂದು ಹಿರಿಯ ಕೆರೆ = ಕೊನೆಯೇ ಇಲ್ಲದಷ್ಟು ವಿಸ್ತಾರವಾಗಿ ವ್ಯಾಪಿಸಿದ ವಿಶ್ವ; ಒಂಬತ್ತು ತೂಬು = ದೇಹದಲ್ಲಿರುವ ಒಂಭತ್ತು ರಂಧ್ರಗಳು. ಕರ್ಣರಂಧ್ರಗಳು ಎರಡು, ನೇತ್ರರಂಧ್ರಗಳು ಎರಡು, ಘ್ರಾಣರಂಧ್ರಗಳು ಎರಡು, ಮುಖ ಒಂದು,
; ಕೆರೆ = ವಿಷಯಜಲದಿಂದ ತುಂಬಿದ ವಿಶ್ವ; ಗಗನ = ಬ್ರಹ್ಮಬಯಲು, ಪರಮ ಆತ್ಮ ಎಂಬ ನಿಸ್ಸೀಮ ಬಯಲು; ಜಲಮಯವಾಗು = ಸಾಂಸಾರಿಕ ವಿಷಯರಸದಿಂದ ತುಂಬಿಹೋಗು; ಜಲವನು = ವಿಷಯರಸವನು; ತುಂಬಿದ = ಅಂತರಂಗದಲಿ ತುಂಬಿಕೊಂಡ; ತುಂಬು = ಶಬ್ದಾದಿ ವಿಷಯ-ವಿಷಯ ರಸಗಳಿಂದ ತುಂಬಿಹೋಗು; ತೂಬು = ನೀರಗಂಡಿ; ನುಡಿವ = ಲಿಂಗಾನುಭವದ ಮಾತುಗಳನಾಡುವ; ಬಂದು = ಹೊರಗೆ ಲೋಕದಲಿ; ಭಂಡಯೋಗಿಗಳು = ಡಾಂಭಿಕ ಯೋಗಿಗಳು; ಮೇಘ = ಮಾಯಾ ಶಕ್ತಿ; ಸುರಿ = ಶಬ್ದಾದಿ ವಿಷಯರಸವ ಸುರಿಸು; ಹತ್ತು ಬಾವಿ = ಶಾಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧ-ಎಂಬ ಪಂಚಜ್ಞಾನ ವೃತ್ತಿಗಳು ಹಾಗೂ ಸಂಕಲ್ಪನ, ಅವಧಾರಣ, ನಿರ್ಧಾರಣ, ಅಹಂಕರಣ ಮತ್ತ; ಹೊರಗೆ = ಆ ಏರಿಯ ಹೊರಗಡೆಯಲ್ಲಿ ;
Written by: Sri Siddeswara Swamiji, Vijayapura