ಮುಂದಳೂರಿಗೆ ಬಟ್ಟೆ ಇದೇ ಹೋಗೆಂದಡೆ
ಅಂಧಕನೇನು ಬಲ್ಲನು ಹೇಳಾ?
ಸಂಗ್ರಾಮದಲ್ಲಿ ಓಡಿದ ಹಂದೆ ಗೆಲಬಲ್ಲನೆ ಹೇಳಾ?
ನಿಂದ ನೀರಿನ ಮಡುವ ಕಂದನೀಸಾಡ ಬಲ್ಲನೆ ಹೇಳಾ?
ಗುಹೇಶ್ವರನೆಂಬ ನಿರಾಳದ ಘನವ
ಪಂಚೇಂದ್ರಿ[ಯ]ಕನೆತ್ತ ಬಲ್ಲನು ಹೇಳಾ?
Transliteration Mundaḷūrige baṭṭe idē hōgendaḍe
andhakanēnu ballanu hēḷā?
Saṅgrāmadalli ōḍida hande gelaballane hēḷā?
Ninda nīrina maḍuva kandanīsāḍa ballane hēḷā?
Guhēśvaranemba nirāḷada ghanava
pan̄cēndri[ya]kanetta ballanu hēḷā?
Hindi Translation आगे गाँव का रास्ता यह है जाओ कहें तो
अंधा क्या जानता है कहो ?
संग्राम में भागा कायर जीत सकता कहो ?
पानी के गहरे गड्ढे में बच्चा तैर सकता कहो ?
गुहेश्वर नामक निराला घन को
पंचेंद्रियासक्त क्या जानता है कहो ?
Translated by: Eswara Sharma M and Govindarao B N
Tamil Translation அடுத்த ஊருக்கு இது வழி செல் என்றால்
குருடனால் இயலுமா, கூறுவாய்
போரில் புறமுதுகிட்ட பேடியால் வெல்லவியலுமா?
ஆழமான மடுவை குழந்தையால் கடக்கவியலுமோ?
குஹேசுவரனெனும் பரம்பொருளின் மேன்மையை
புலனின்பங்களைத் துய்ப்பவனால் அறியவியலுமோ?
Translated by: Smt. Kalyani Venkataraman, Chennai
ಶಬ್ದಾರ್ಥಗಳು ಘನ = ಬ್ರಹ್ಮ, ಪರಿಪೂರ್ಣ, ಅಖಂಡಸತ್ಯ; ನಿಂದ = ನಿಂತ ನೀರಿನ; ನಿರಾಳ = ಪರಿಶುದ್ದ, ಗುಣ-ಕ್ರಿಯೆಗಳಿಲ್ಲದ ಪರವಸ್ತು, ಬಯಲು; ನಿಲವಿನ ಮಡು = ಆಳವಾದ ಮಡು; ಪಂಚೇಂದ್ರಿಯಕ = ಪಂಚ ಇಂದ್ರಿಯಗಳ ವಿಲಾಸದಲಿ ಮುಳುಗಿದವ; ಬಟ್ಟೆ = ದಾರಿ; ಮುಂದಳೂರು = ಮುಂದಿನ ಊರು; ಹಂದೆ = ಹೇಡಿ, ಅಂಜುಕುಳಿ;
Written by: Sri Siddeswara Swamiji, Vijayapura