•  
  •  
  •  
  •  
Index   ವಚನ - 495    Search  
 
ರೂಪನೆ ಕಂಡರು, ನಿರೂಪನೆ ಕಾಣರು. ತನುವನೆ ಕಂಡರಲ್ಲದೆ, ಅನುವನೆ ಕಾಣರು. ಆಚಾರವನೆ ಕಂಡರು, ವಿಚಾರವನೆ ಕಾಣರು. ಗುಹೇಶ್ವರಾ, ನಿಮ್ಮ ಕುರುಹನೆ ಕಂಡರು, ಕೂಡಲರಿಯದೆ ಕೆಟ್ಟರು!
Transliteration Rūpane kaṇḍaru, nirūpane kāṇaru. Tanuvane kaṇḍarallade, anuvane kāṇaru. Ācāravane kaṇḍaru, vicāravane kāṇaru. Guhēśvarā, nim'ma kuruhane kaṇḍaru, kūḍalariyade keṭṭaru!
Hindi Translation रूप देखें, निरूप नहीं जाने। उपासना देखें, विस्तार नहीं जाने । आचार देखें, विचार नहीं जाने। गुहेश्वरा तुम्हारा चिह्न देखे । बिना संग्राम जाने बिगड़े। Translated by: Eswara Sharma M and Govindarao B N
Tamil Translation உருவத்தைக் காண்பர். உருவமற்றதைக் காணார். உருவவழிபாடு செய்வர். பரத்தைக் காணார். ஆசாரத்தைக் கண்டனர். ஆராய்ந்து அறியார். குஹேசுவரனே, உம் அடையாளத்தைக் கண்டனர். ஒருமிப்பதற்கு அறியாரன்றோ. Translated by: Smt. Kalyani Venkataraman, Chennai
ಶಬ್ದಾರ್ಥಗಳು ಅನುವು = ದೇವತಾ ಉಪಾಸನೆ; ಆಚಾರ = ಶುದ್ದ ನಡತೆ, ಪ್ರಸಾದಾಚರಣೆ; ಕಾಣು = ನೋಡು, ಧರಿಸು, ಅರ್ಚಿಸು; ಕುರುಹು = ದೇವನ ಕುರುಹಾದ ಲಿಂಗ; ಕೂಡು = ಲಿಂಗದಲಿ ಬೆರೆತು ಒಂದಾಗು; ತನು = ವಿಸ್ತಾರವಾದುದು, ವ್ಯಾಪಕವಾದುದು; ನಿರೂಪು = ರೂಪಿಲ್ಲದ ಅದೃಶ್ಯ ಪರಮಾತ್ಮ; ರೂಪು = ರೂಪುಳ್ಳ ದೃಶ್ಯಜಗತ್ತು; ವಿಚಾರ = ಆತ್ಮವನು ಅನಾತ್ಮದಿಂದ ಬೇರ್ಪಡಿಸಿ ನೋಡುವುದು, ಜಡವಿಲಕ್ಷಣವಾದ ಪರಮಾತ್ಮನ ಸ್ವರೂಪಜ್ಞಾನ; Written by: Sri Siddeswara Swamiji, Vijayapura