ಇರುಳೊಂದು ಮುಖ ಹಗಲೊಂದು ಮುಖ,
ಕಾಯವೊಂದು ಮುಖ ಜೀವವೊಂದು ಮುಖ,
ಬುದ್ಧಿಯನರಿಯದಿದೆ ನೋಡಾ!
ಪ್ರಾಣಲಿಂಗವೆಂಬ ಭ್ರಾಂತು ನೋಡಾ!
ಇದು ಕಾರಣ, ಮೂರುಲೋಕವೆಯ್ದೆ
ಬರುಸೂರೆವೋಯಿತ್ತು ಗುಹೇಶ್ವರಾ.
Transliteration Iruḷondu mukha hagalondu mukha,
kāyavondu mukha jīvavondu mukha,
bud'dhiyanariyadide nōḍā!
Prāṇaliṅgavemba bhrāntu nōḍā!
Idu kāraṇa, mūrulōkaveyde
barusūrevōyittu guhēśvarā.
Hindi Translation रात एक मुँह, दिन एक मुँह,
शरीर एक मुँह,जीव एक मुँह।
बुद्धि नहीं जानते देखो!
प्राणलिंग जैसे भ्रांति देखो!
इस कारण तीन लोक भ्रांति से
व्यर्थ बीत गये गुहेश्वरा ।
Translated by: Eswara Sharma M and Govindarao B N
Tamil Translation இருளில் ஒருவிதம், பகலில் ஒருவிதம்!
உடல் ஒரு விதம், ஜீவன் ஒருவிதம்!
ஞானத்தை அறியாமலுள்ளதைக் காணாய்!
பிராணலிங்கத்தை உணர்ந்தோமெனும் மருட்சி காணாய்!
இதனால் மூவுலகும் பயனற்றுப் போயிற்று குஹேசுவரனே.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಕಾಯ = ದೇಹದ ಎಳೆತಗಳು; ಜೀವ = ಜೀವದ ಕನಸುಗಳು; ಪ್ರಾಣಲಿಂಗ = ಅಂತರ್ಯಾಮಿಯಾದ ಪರಮಶಿವ; ಬರುಸೂರೆಹೋಗು = ವ್ಯರ್ಥವಾಗು; ಬುದ್ದಿ = ಶಿವಬುದ್ದಿ, ಆತ್ಮಜ್ಞಾನ; ಭ್ರಾಂತು = ಕಂಡೆವೆಂಬ ಭ್ರಮೆ; ಮುಖ = ರೀತಿ, ಬದುಕಿನ ಬಗೆ, ಆಸಕ್ತಿಗಳು, ವ್ಯವಹಾರಗಳು;
Written by: Sri Siddeswara Swamiji, Vijayapura