ಕುಲದಲಧಿಕನು ಹೋಗಿ ಹೊಲೆಗೇರಿಯಲ್ಲಿ ಮನೆಯ ಕಟ್ಟಿದಡೆ,
ಕುಲ ಕೆಡದಿಪ್ಪ ಈ ಪರಿಯ ನೋಡಾ!
ಆತನ ಕುಲದವರೆಲ್ಲರು ಮುಖವ ನೋಡಲೊಲ್ಲದಡೆ
ಕುಲವುಳ್ಳವರೆಲ್ಲರೂ ಕೈವಿಡಿದರು.
ಕುಲಗೆಟ್ಟವನೆಂದು ತಿಳಿದು ವಿಚಾರಿಸಲು,
ಹೊಲೆಗೆಟ್ಟು ಹೋಯಿತ್ತು ಕಾಣಾ ಗುಹೇಶ್ವರಾ.
Hindi Translationउच्चकुलवाला जाकर चांडाल की बस्ती में घर बनाये तो
कुल बिना बिगड़ने की रीति देखो।
उसके कुलज बिना मुख देखे रहते हैं ।
कुलजों ने हाथ पकड़ा।
जातिभ्रष्ट समझकर विचार करें तो
क्रम बिगड़ गया देखो गुहेश्वरा ।
Translated by: Eswara Sharma M and Govindarao B N
English Translation
Tamil Translationநற்குலத்தினன் சேரியில் வீட்டைக்கட்டி
குலம் கெடாமல் இருந்த முறையைப் பாராய்!
அவன் குலத்தினைவரும் அவனை ஏற்றுக் கொண்டனர்
குலமுள்ள அனைவரும் அவன் கரத்தைப் பற்றினர்
குலம் கெட்டவன் என்று அறிந்து ஆராயின்
மாசு அகன்றது காணாய் குஹேசுவரனே!
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಸಂಸಾರಹೇಯಸ್ಥಲ
ಶಬ್ದಾರ್ಥಗಳುಆತನ = ಜೀವಾತ್ಮನ ; ಕುಲದಲಧಿಕನು = ಶಿವಾಂಶಿಕನಾದ ಜೀವಾತ್ಮನು; ಕುಲದವರೆಲ್ಲರು = ಈಗಿನ ಕುಲದವರೆಲ್ಲರು; ಕುಲವುಳ್ಳವರು = ನಿಜವಾದ ಶಿವಕುಲದವರು, ಶಿವಜ್ಞಾನಿಗಳು, ಅನುಭಾವಿ ಗುರುಗಳು.; ಮನೆಯ ಕಟ್ಟಿದ = ನೆಲೆಸಿದ; ಹೊಲೆಗೇರಿಯಲ್ಲಿ = ಸಂಸಾರದಲ್ಲಿ, ಮಲಘಟಿತ ದೇಹದಲ್ಲಿ; Written by: Sri Siddeswara Swamiji, Vijayapura