Hindi Translationअज्ञानी को सुज्ञान कहाँ ?
सुज्ञानी को भूल कहाँ ?
अहं ज्ञानी के सामने प्रश्न कर सकते ?
भ्रांति भ्रम में क्लांत हुए
वाचाल में ज्ञान है क्या?
सूतक सूखे बिना, संदेह दूर हुए बिना,
आगे का सूक्ष्म देखने की स्थिति कैसे ?
ज्योति के गर्भ में जन्मे
कांतियुक्त प्रकाश गुहेश्वरा, तुम्हारा शरण।
Translated by: Eswara Sharma M and Govindarao B N
English Translation
Tamil Translationஅஞ்ஞானிக்கு அறிவு அரும்புமோ?
ஞானிக்கு மறதி ஏற்படுமோ?
நானறிந்தவன் என்னும் உணர்வுடையோன்
பிறர் சொல்லைச் செவிமடுப்பானோ?
ஆழமான மருட்சியிலே துன்புறும்பொழுது
வெற்றுச்சொல்மாலையாலே அறிவு உண்டோ?
மாசு அகலாது, சந்தேகம் மறையாது
பரம்பொருளை உணரும் வழி எதுவோ?
ஒளியின் உடலிலே தோன்றிய பேரொளியெனத்
திகழ்பவன் குஹேசுவரனின் சரணன்
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶರಣಸ್ಥಲ
ಶಬ್ದಾರ್ಥಗಳುಅಜ್ಞಾನಿ = ಆತ್ಮಾನಾತ್ಮಗಳನ್ನು ವಿವರಿಸಿ ನೋಡುವ ವಿವೇಚನೆ ಇಲ್ಲದವ; ಅರಿವು = ತನ್ನ ನೈಜಸ್ವರೂಪದ ತಿಳಿವು, ಸರ್ವವ್ಯಾಪಕವಾದ ಪರಮ ಆತ್ಮನ ಹೊಳಹು; ಇದಿರ = ತನಗೆ ಪ್ರತಿಯಾಗಿ ಪರಮಜ್ಞಾನವನ್ನು ಹೊಂದಿದವರ ಭೋಧಪರ ಮಾತುಗಳನ್ನು ; ಕಾಂತಿಯುತ ಪ್ರಭೆಯ = ದಿವ್ಯ ಪ್ರಭೆಯ; ಕೇಳಲುಂಟೆ? = ಕೇಳುವುದೇ ಇಲ್ಲ; ಜನಿಸಿದ = ಕಾಣಬಂದ; ಜ್ಯೋತಿ = ಚಿದ್ಘನಪರಂಜ್ಯೋತಿ; ನಾನು ಅರಿದೆನು ಎಂಬಾತ = ನಾನು ಏನೆಲ್ಲವನು ಅರಿತಿದ್ದೇನೆ ಎಂದು ಹೇಳುವವ, ಜ್ಞಾನಾಹಂಕೃತಿಯ ಹೊಂದಿದವ, ತನ್ನ ಹಾಗೂ ವಿಶ್ವದ ವಿಷಯದಲ್ಲಿ ಹುಸಿಜ್ಞಾನ; ಬಸಿರೊಳಗೆ = ಒಡಲೊಳಗೆ; ಬೆಳಗು = ಕಳೆ, ಜ್ಞಾನಕಳೆ; ಭ್ರಾಂತಿನ ಭ್ರಮೆ = ಗಾಢವಾದ ಭ್ರಮೆ; ಮರುಹು = ಸತ್ಯವಸ್ತುವಿನ ವಿಸ್ಮೃತಿ; ಸಂದೇಹ = ಆತ್ಮದ ವಿಷಯದಲ್ಲಿ ಖಚಿತವಾದ ಜ್ಞಾನವಿಲ್ಲದಿರುವುದು; ಸುಜ್ಞಾನಿ = ಜಡ ವಿಲಕ್ಷಣವಾದ ಆತ್ಮದ ಅರಿವುಳ್ಳವ, ಅರಿವಿನ ಸರ್ವಾಧಾರ ಸತ್ಯದ ಭಾವವುಳ್ಳವ; ಸೂಕ್ಷ್ಮ = ಸೂಕ್ಷ್ಮಾತಿಸೂಕ್ಷ್ಮವಾದ ಅಜಡತತ್ವ್ತ, "ನಿಃಶಬ್ದಂ ಬ್ರಹ್ಮ" ಎಂಬ ಶಿವಸತ್ಯ, ಆ ಶಿವನತ್ತ ನಡೆಸುವ ಶಿವಯೋಗಮಾರ್ಗ; ಸೂತಕ = "ನಾನು ಜಡವಾದ ದೇಹ" ಎಂಬ ಭಾವಮಾಲಿನ್ಯ ; Written by: Sri Siddeswara Swamiji, Vijayapura