ಭಕ್ತಿಯೆಂಬುದು ಯುಕ್ತಿಯೊಳಗು,
ಪೂಜೆಯೆಂಬುದು ನಿರ್ಮಾಲ್ಯದೊಳಗು.
ಪ್ರಸಾದವೆಂಬುದು ಓಗರದೊಳಗು,
ಆಚಾರವೆಂಬುದು ಅನಾಚಾರದೊಳಗು.
ಧರ್ಮವೆಂಬುದು ಅಧರ್ಮದೊಳಗು,
ಸುಖವೆಂಬುದು ದುಃಖದೊಳಗು.
ವ್ರತವೆಂಬುದು ವೈರಾಗ್ಯದೊಳಗು,
ನೇಮವೆಂಬುದು ಉದ್ದೇಶದೊಳಗು.
ಅಹಿಂಸೆಯೆಂಬುದು ಹಿಂಸೆಯೊಳಗು!-
ಇವಾವಂಗವೂ ಇಲ್ಲದೆ
ಗುಹೇಶ್ವರಾ ನಿಮ್ಮ ಶರಣ ಸುಖಿಯಾಗಿರ್ದನು!
Transliteration Bhaktiyembudu yuktiyoḷagu,
pūjeyembudu nirmālyadoḷagu.
Prasādavembudu ōgaradoḷagu,
ācāravembudu anācāradoḷagu.
Dharmavembudu adharmadoḷagu,
sukhavembudu duḥkhadoḷagu.
Vratavembudu vairāgyadoḷagu,
nēmavembudu uddēśadoḷagu.
Ahinseyembudu hinseyoḷagu!-
Ivāvaṅgavū illade
guhēśvarā nim'ma śaraṇa sukhiyāgirdanu!
Hindi Translation भक्ति मुक्ति का संबंध, पूजा निर्माल्य का संबंध।
प्रसाद आहार का संबंध, आचार अनाचार का संबंध |
धर्म अधर्म का संबंध, सुख दुःख का संबंध ।
व्रत वैराग्य का संबंध, नियम उद्योग का संबंध।
अहिंसा हिंस का संबंध।
इन सब अंगों के बिना
गुहेश्वरा तुम्हारा शरण सुखी हुआ था।
Translated by: Eswara Sharma M and Govindarao B N
Tamil Translation பக்திக்கு முக்தியின் தொடர்பு,
பூஜைக்கு நிர்மாலியத்தின் தொடர்பு
பிரசாதத்திற்குப்படையலின் தொடர்பு,
ஆசாரத்திற்கு அனாசாரத்தின் தொடர்பு
தர்மத்திற்கு அதர்மத்தின் தொடர்பு,
இன்பத்திற்குத் துன்பத்தின் தொடர்பு
நோன்பிற்குப் பற்றின்மையின் தொடர்பு,
நியமத்திற்குப் பணியின் தொடர்பு
அகிம்சைக்கு, இம்சையின் தொடர்பு,
இந்த இருமைகள் அற்று
குஹேசுவரனே, உம் சரணன் பேரின்பமுற்றனன்மன்று
குஹேசுவரனே, உம்முடன் இணைவது
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಧರ್ಮ = ಸ್ವ-ಪರ ಅಹಿತಾಚರಣೆ; ಅನಾಚಾರ = ದುರ್ವರ್ತನೆ; ಅಹಿಂಸೆ = ಯಾವುದನ್ನೂ ಹಿಂಸಿಸದಿರುವ ಮನೋಭಾವ; ಆಚಾರ = ಸದ್ವರ್ತನೆ; ಇವಾವಂಗವೂ ಇಲ್ಲದೆ = ಈ ದ್ವಂದ್ವಗಳಲ್ಲಿ ಯಾವುದೊಂದು ಇಲ್ಲದೆ; ಉದ್ಯೋಗ = ನಿಯಮಿತವಾಗಿ ಮಾಡುವ ಲೌಕಿಕ ಉದ್ಯಮ; ಒಳಗು = ಸಂಬಂಧಿತ; ಓಗರ = ಭೋಜ್ಯಪದಾರ್ಥ; ದುಃಖ = ಅ-ಹಿತಕರ ಅನುಭವ; ಧರ್ಮ = ಸ್ವ-ಪರ ಹಿತಾಚರಣೆ; ನಿರ್ಮಾಲ್ಯ = ಹಾಗೆ ಅರ್ಪಿಸಿ ತೆಗೆದ ಪುಷ್ಪ, ಅರ್ಪಿಸಿಕೊಂಡ ಪುಷ್ಪ; ನೇಮ = ನಿಯಮಿತವಾಗಿ ಮಾಡಲಾಗುವ ಧಾರ್ಮಿಕ ಕ್ರಿಯಾಚರಣೆ; ಪೂಜೆ = ಆಚರಿಸುವ ಕ್ರಿಯೆ; ಪ್ರಸಾದ = ಆ ಓಗರವನ್ನು ಲಿಂಗಕ್ಕೆ ಅರ್ಪಿಸಿ ಪಡೆದುದು; ಭಕ್ತಿ = ದೇವನ ಬಗೆಗಿರುವ ಪರಮಪ್ರೇಮ; ಮುಕ್ತಿ = ಜೀವನನ್ನು ಜನ್ಮ-ಮರಣಂಗಳಿಗೆ ಬಂಧಿಸಿದ ಮೋಹ-ಮಾಯೆಗಳ ನಿವೃತ್ತಿ; ವೈರಾಗ್ಯ = ಸಂಕಲ್ಪರಹಿತ ಸ್ಥಿತಿ; ವ್ರತ = ಸಂಕಲ್ಪಯುಕ್ತವಾಗಿ ಆಚರಿಸಲಾಗುವ ಪೂಜಾರಿ ಧಾರ್ಮಿಕ ಕ್ರೀಗಳು; ಸುಖ = ಹಿತಕರ ಅನುಭವ; ಹಿಂಸೆ = ನೋವನ್ನುಂಟು ಮಾಡುವ ಮನೋಭಾವ;
Written by: Sri Siddeswara Swamiji, Vijayapura