ಭಕ್ತನೆಂಬವ ಸೂತಕಿ, ಲಿಂಗೈಕ್ಯನೆಂಬವ ವ್ರತಗೇಡಿ.
ಶರಣಸತಿ ಲಿಂಗಪತಿ ಎಂಬ ಶಬ್ದ ಸರ್ವಗುಣಸಾಹಿತ್ಯ ಎಂಬಾತ
ಕರ್ಮೇಂದ್ರಿಯ ಭೋಗಕ್ಕೆ ಬಾರದ ಭೋಗಿ,
ಗುಹೇಶ್ವರಾ ನಿಮ್ಮ ಶರಣ,
ಆವ ಭೀತನೂ ಅಲ್ಲ
ಆವ ಕರ್ಮಿಯೂ ಅಲ್ಲ.
Hindi Translationभक्त कहना सूतकी, लिंगैक्य कहना व्रतगेड़ी।
शरण सति लिंग पति जैसा शब्द सर्वगुण साहित्य कहना
कर्मेंद्रिय भोग के अनागत भोगी!
गुहेश्वरा तुम्हारा शरण
वह भीत भी नहीं; वह कर्मी भी नहीं।
Translated by: Eswara Sharma M and Govindarao B N
English Translation
Tamil Translationபக்தனென்பவன் புளுகன், இலிங்கத்துடனிணைந்தே னென்பவன்
நியமமற்றவன், “சரணசதி - லிங்கபதி” என்பது
எல்லா இயல்புகளும் கூடியது என்போன் அகத்திலே
வாசனைகளைத் துய்ப்போன். குஹேசுவரனே, உம் சரணன்
அஞ்சுபவனுமல்லன், கர்மமற்றவனன்றோ
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶರಣಸ್ಥಲ
ಶಬ್ದಾರ್ಥಗಳುಎಂಬವ = ನಾನು ಲಿಂಗೈಕ್ಯನು ಎಂದು ಘೋಷಿಸುವವ; ಎಂಬಾತ = ತನ್ನಲ್ಲಿ ಇವೆ ಎಂದು ಹೇಳುವವ; ಕರ್ಮಿ = ಕಾಮ್ಯಕರ್ಮನಿರತ; ಕರ್ಮೇಂದ್ರಿಯಭೋಗಕ್ಕೆ = ಬಾಹ್ಯಕರಣಗಳಾದ ಕರ್ಮೇಂದ್ರಿಯಗಳಿಗೆ ನಿಲುಕದ; ಭಕ್ತನೆಂಬವ = ನಾನು ಭಕ್ತನು ಎಂದು ಹೇಳಿಕೊಳ್ಳುವವ; ಭೀತ = ಭವಭೀತ; ಭೋಗಿ = ಅಂತರ್ವಾಸನಾಭೋಗಿಯು; ಲಿಂಗಪತಿ = ಸರ್ವಾಧಾರವೂ ಸರ್ವವ್ಯಾಪಕವೂ ಆನಂದ ಘನವೂ ಆದ ಸರ್ವಾಂತರ್ಯಾಮಿ ಲಿಂಗ,
ಶರಣಸ್ಥಲಿಗೆ ಅವನು ಆರಾಧ್ಯನಾದುದರಿಂದ ಪತಿ.; ಲಿಂಗೈಕ್ಯ = ಲಿಂಗದೊಡನೆ ಸಮರಸನಾದವ; ವ್ರತಗೇಡಿ = ಲಿಂಗೈಕ್ಯ ಏನು ಎಂಬುದನೇ ಅರಿಯದವ, ಅಜ್ಞಾನಿ; ಶಬ್ದ = "ಶರಣಸತಿ-ಲಿಂಗಪತಿ" ಎಂಬ ಮಾತು(ನಿರ್ದೇಶಿಸುವ); ಶರಣಸತಿ = ಪ್ರಾಣಲಿಂಗಾನುಸಂಧಾನದಿಂದ "ನಾನು ಚಿದಂಶ" ಎಂಬ ಸುಜ್ಞಾನವನು ಪಡೆದವ, ಅನ್ಯಭಾವಗಳ ತೊರೆದು ಲಿಂಗದೊಂದಿಗೆ
ಪರಮೋನ್ನತಪ್ರೇಮ; ಸರ್ವಗುಣ ಸಾಹಿತ್ಯ = ಎಲ್ಲ ಗುಣಸಮೂಹ; ಸೂತಕಿ = ಶಬ್ದಸೂತಕಿ, ಹುಸಿ ಮಾತುಗಾರ; Written by: Sri Siddeswara Swamiji, Vijayapura