•  
  •  
  •  
  •  
Index   ವಚನ - 541    Search  
 
ಉದಕದ ಕೈಕಾಲ ಮುರಿದು, ಅಗ್ನಿಯ ಕಿವಿಮೂಗನರಿದು, ವಾಯುವ ತಲೆಯ ಕೊಯ್ದು, ಆಕಾಶವ ಶೂಲದಲಿಕ್ಕಿದ, ಬಲ್ಲಿದ ತಳವಾರನೀತನು! ಅರಸು, ಪ್ರಧಾನ, ಮಂತ್ರಿ-ಮೂವರ ಮುಂದುಗೆಡಿಸಿದ ಬಲ್ಲಿದ ತಳವಾರನೀತನು! ಒಂಬತ್ತು ಬಾಗಿಲ ಕದವನಿಕ್ಕಿ ಬಲಿದು ಬಿಯ್ಯಗವ ಹೂಡಿ ನವಸಾಸಿರ ಮಂದಿಯ ಕೊಂದುಳಿದನು ಗುಹೇಶ್ವರಾ ನಿಮ್ಮ ಶರಣ.
Transliteration Udakada kaikāla muridu, agniya kivimūganaridu, vāyuva taleya koydu, ākāśava śūladalikkida, ballida taḷavāranītanu! Arasu, pradhāna, mantri-mūvara mundugeḍisida ballida taḷavāranītanu! Ombattu bāgila kadavanikki balidu biyyagava hūḍi navasāsira mandiya konduḷidanu guhēśvarā nim'ma śaraṇa.
English Translation 2 He's powerful, this policeman! broke off the hands and feet of water lopped off the nose and ears of fire beheaded the winds and impaled the sky on a stake. Destroyed the king and his two ministers. Closed and shot the bolts of the nine gates and locked them up killed nine thousand men till he was left alone our Lord of Caves.

Translated by: A K Ramanujan
Book Name: Speaking Of Siva
Publisher: Penguin Books ---------------------

Hindi Translation जल के हाथ पैर तोडकर, अग्नि के नाक कान फाडकर, वायु का सिर काटकर, आकाश को शूल पर रखा धीर पहरेदार है! राजा, दीवान, मंत्रि तीनों का नाश किया धीर पहरेदार है। नौ द्वारों के दरवाजे के ताल बंद करके, नौ हजार लोगों को हत्या कर बचा गुहेश्वरा । Translated by: Eswara Sharma M and Govindarao B N
Tamil Translation ‘நீரின் கை, காலை முறித்து, தீயின் செவி, மூக்கை அரிந்து, வாயுவின் தலையைக் கொய்து ஆகாயத்தைச் சூலத்தில் இருத்திய, திறமைமிக்க வீரன் இவன்! அரசன், படைத்தலைவன், அமைச்சர் என்னும் மூவரை அடக்கிய திறமைமிக்க வீரன் இவன்! ஒன்பது நுழைவாயிலைமூடி, இழுத்துப்பூட்டி கணக்கற்றோரைக் கொன்று நிலைத்தனன் குஹேசுவரனே Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಗ್ನಿ = ಸಾಂಸಾರಿಕ ತಾಪಕ್ಕೆ ಕಾರಣವಾದ ರಾಗ-ದ್ವೇಷ, ದುರಭಿಮಾನಗಳು; ಅರಸು ಪ್ರಧಾನ ಮಂತ್ರಿ = ರಾಜ, ಮಹಾದಂಡನಾಯಕ; ಆಕಾಶ = ಬಯಲ ಭ್ರಾಂತಿ, ಅರ್ಥವಿಲ್ಲದ ಬರಿ ಭ್ರಾಂತಿ; ಈತನು = ಈ ಶರಣನು; ಉದಕ = ಹರಿದಾಡುವ ಮನಸ್ಸು; ಉಳಿ = ತಾನೇ ತಾನಾಗಿ ನಿಲ್ಲು; ಒಂಭತ್ತು ಬಾಗಿಲು = ಇಂದ್ರಿಯ ದ್ವಾರಗಳು; ಕದವನು ಇಕ್ಕು = ಮುಚ್ಚು; ಕಿವಿಮೂಗನರಿ = ಭಂಗಿಸು; ಕೈಕಾಲ ಮುರಿ = ನಿಶ್ಚಲಗೊಳಿಸು; ಕೊಂದು = ಕೊಲ್ಲು, ಅಡಗಿಸು; ತಲೆಯ ಕೊಯ್ = ಹಿಡಿದಿಡು, ಬಂಧಿಸು; ತಳವಾರನು = ಶೂರಾಗ್ರಣಿಯು; ನವಸಾಸಿರ ಮಂದಿ = ಅಸಂಖ್ಯವಾದ ಮನೋಗತ ವೃತ್ತಿಗಳು; ಬಲಿದು ಬೀಗವ ಹೂಡಿ = ಬಲವಾಗಿ ಬಂಧಿಸು; ಬಲ್ಲಿದ = ಜಾಣನು, ಧೀರನು; ಮಂತ್ರಿ = ಜಾಗ್ರಾದಿ ಅವಸ್ಥೆಗಳಲ್ಲಿ ಅಧಿಪತ್ಯಮಾಡುವ ವಿಶ್ವ, ತೈಜಸ ಮತ್ತು ಪ್ರಾಜ್ಞ ಜೀವರು; ಮುಂದುಗೆಡಿಸು = ಸದ್ದಡಗಿಸು; ವಾಯು = ಪ್ರಾಣ-ವಾಯು; ಶೂಲದಲಿಕ್ಕು = ಕೊಂದುಹಾಕು, ನಷ್ಟಗೊಳಿಸು; Written by: Sri Siddeswara Swamiji, Vijayapura