ಅಂಗ ಲಿಂಗದಲ್ಲಿ ತರಹರವಾಗಿ,
ಸಮತೆ ಶಾಂತಿಯಲ್ಲಿ ತರಹರವಾಗಿ,
ಮನ ಜ್ಞಾನದಲ್ಲಿ ತರಹರವಾಗಿ,
ಭಾವ ನಿರ್ಭಾವದಲ್ಲಿ ತರಹರವಾಗಿ
ಇರಬಲ್ಲಡೆ, ಆತನೆ ಅಚ್ಚಶರಣನು ಕಾಣಾ ಗುಹೇಶ್ವರಾ.
Transliteration Aṅga liṅgadalli taraharavāgi,
samate śāntiyalli taraharavāgi,
mana jñānadalli taraharavāgi,
bhāva nirbhāvadalli taraharavāgi
iraballaḍe, ātane accaśaraṇanu kāṇā guhēśvarā.
Hindi Translation अंग लिंग में मिलकर,
मन ज्ञान में मिलकर,
भाव निर्भाव में मिलकर
समता शांति में मिले तो
वहीं शरण देखो गुहेश्वरा ।
Translated by: Eswara Sharma M and Govindarao B N
Tamil Translation உடல் இலிங்கத்தில் இணைய,
மனம் ஞானத்தில் இணைய,
உணர்வு உணர்வற்றதில் இணைய,
அடங்கியமனம் இலிங்கத்தில் இணைய,
இயலுமெனின் அவனே உண்மையான
சரணன், காணாய் குஹேசுவரனே.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಂಗ = ದೇಹ; ಜ್ಞಾನದಲ್ಲಿ = ಅರಿವಿನ ಘನವಾದ ಮಹಾಲಿಂಗದಲ್ಲಿ ; ತರಹರವಾಗು = ಒಂದಾಗು; ನಿರ್ಭಾವದಲ್ಲಿ = ಪರಮ ಆನಂದರೂಪ ಹಾಗೂ ನಿರ್ಬಯಲರೂಪ ಮಹಾಲಿಂಗದಲ್ಲಿ; ಮನ = ಸಂಕಲ್ಪವಿಕಲ್ಪಾತ್ಮಕವಾದ ಮನಸ್ಸು; ಲಿಂಗದಲ್ಲಿ = ಸರ್ವಕಾರಣವೂ ಸರ್ವಮೂಲವೂ ಆದ ಮಹಾಲಿಂಗದಲ್ಲಿ; ಶಾಂತಿ = ಯಾವ ಮಿಸುಗೂ ಇಲ್ಲದ ನಿಶ್ಯಬ್ದ ಬ್ರಹ್ಮ, ಸರ್ವತತ್ವ್ತಗಳ ಉಪರಮಸ್ಥಾನವಾದ ಮಹಾಲಿಂಗ; ಸಮತೆ = ಸಮರಸಭಾವ;
Written by: Sri Siddeswara Swamiji, Vijayapura