ದೇವಲೋಕದ ದೇವಗಣಂಗಳೆಲ್ಲ
ಎನ್ನ ಹೊರಗೆಂಬರು; ಅದು ತಾ ದಿಟವೆ?
ಮರ್ತ್ಯಲೋಕದವರೆಲ್ಲ ಎನ್ನ ಹೊರಗೆಂಬರು
ಅದು ತಾ ದಿಟವೆ? ಸತ್ಯ ಸಾತ್ವಿಕ ಸದ್ಭಕ್ತರು
ಎನ್ನ ಹೊರಗೆಂಬರು; ಅದು ದಿಟವೆ?
ಹದಿನಾಲ್ಕು ಭವನದೊಳಗೆ ಅವರು ತಾವಿರಲಿ,
ನಾ ನಿಮ್ಮೊಳಗು ಗುಹೇಶ್ವರಾ.
Hindi Translationदेव लोक के सब देव गण मुझे बाहर का कहते।
वह सच ही है।
सत्य-सात्विक सद्भक्त मुझे बाहर का कहते।
वह सच ही है।
चौदह भुवनों में वे ही रहें,
मैं तुममें गुहेश्वरा।
Translated by: Eswara Sharma M and Govindarao B N
English Translation
Tamil Translationதேவலோகத்திலுள்ள தேவகணங்கள் என்னைப்
புறம்பானவனென்பர். அது உண்மையே
மெய்யான சாத்துவிக நல்பக்தர் என்னைப்
புறம்பானவரென்பர் அது உண்மையே
பதினான்கு உலகினுள்ளே அவர்கள் வாழட்டும்
நான் உம் அகத்திலே குஹேசுவரனே
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶರಣಸ್ಥಲ
ಶಬ್ದಾರ್ಥಗಳುಅದು ದಿಟವೆ = ಅವರ ಆ ಮಾತು ಸುಳ್ಳಲ್ಲ ಸತ್ಯವೆ; ದೇವಗಣಂಗಳು = ದೇವನ ಅನುಯಾಯಿಗಳಾದ ವೀರಭಕ್ತರು; ಸತ್ಯ = ಪ್ರಾಮಾಣಿಕತೆ; ಸದ್ಭಕ್ತರು = ನಿತ್ಯ ನೇಮಾಚಾರಸಂಪನ್ನಭಕ್ತರು; ಸಾತ್ವಿಕ = ಪರಿಶುದ್ದತೆ(ಉಳ್ಳವರು); ಹದಿನಾಲ್ಕು ಭುವನ = ಸತ್ವಾದಿ ಪ್ರಕೃತಿನಿರ್ಮಿತವಾದ ಲೋಕಾದಿಲೋಂಕಗಳು, ಸುಖ-ದುಃಖ ಭೋಗತಾಣಗಳು, ಜನ್ಮ-ಮರಣ ಕಟ್ಟಳೆಗೆ ಒಳಗಾದ ಜೀವನೆಲೆಗಳು; ಹೊರಗೆ ಎಂಬರು = ದೇವಲೋಕಕ್ಕೆ ನಾನು ಹೊರತಾದವನು ಎಂದು ಹೇಳುತ್ತಾರೆ; Written by: Sri Siddeswara Swamiji, Vijayapura