•  
  •  
  •  
  •  
Index   ವಚನ - 550    Search  
 
ಹಿಂದಣ ಕವಿಗಳೆನ್ನ ತೊತ್ತಿನ ಮಕ್ಕಳು, ಮುಂದಣ ಕವಿಗಳೆನ್ನ ಕರುಣದ ಕಂದಗಳು. ಆಕಾಶದ ಕವಿಗಳೆನ್ನ ತೊಟ್ಟಿಲ ಕೂಸು. ಹರಿಬ್ರಹ್ಮರೆನ್ನ ಕಕ್ಷಕುಳ. ನೀ ಮಾವ ನಾನಳಿಯ ಗುಹೇಶ್ವರಾ.
Transliteration Hindaṇa kavigaḷenna tottina makkaḷu, mundaṇa kavigaḷenna karuṇada kandagaḷu. Ākāśada kavigaḷenna toṭṭila kūsu. Haribrahmarenna kakṣakuḷa. Nī māva nānaḷiya guhēśvarā.
English Translation 2 Poets of the past are the children of my concubines. Poets to come are infants of my pity. The poets of the sky are babies in my cradle. Viṣṇu and Brahma Are my kinsmen and sidekicks. You are the father-in-law and I the son-in-law, O Lord of Caves.

Translated by: A K Ramanujan
Book Name: Speaking Of Siva
Publisher: Penguin Books ---------------------

Hindi Translation प्राचीन कवि मेरे सेवक के पुत्र, नवीन कवि मेरे करुणा के पुत्र। आकाश के कवि झूले के शिशु । हरिबुद्ध मेरे काँक शिशु । तू ससुर, मैं दामाद गुहेश्वरा । Translated by: Eswara Sharma M and Govindarao B N
Tamil Translation முன்பிருந்த கவிகள் என் தொண்டரின் குழந்தைகள் பின்பு வந்து கவிகள் என் அருள் பெற்ற குழந்தைகள் ஆகாயத்தின் கவி என் தொட்டிலிலுள்ள குழந்தை ஹரியும் பிரம்மரும் என் கைக்குழந்தைகள் நீ மாமன் நான் மருமகன் குஹேசுவரனே Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಳಿಯ, ಮಾವ = ಪರಶಿವನ ವಿಶುದ್ದ ಚಿದಂಶವೇ ಚಿಚ್ಛಕ್ತಿ, ಶರಣನು ಆ ಶಕ್ತಿಯನು ವರಿಸಿದನಾಗಿ ಶಿವನಿಗೆ ಶರಣ ಅಳಿಯ , ಶರಣನಿಗೆ ಪರಶಿವ ಮಾವ; ಆಕಾಶದ ಕವಿಗಳು = ಬಯಲ ತತ್ತ್ವದ ಕವಿಗಳು; ಕಕ್ಷಕುಳ = ಕಂಕುಳ ಕೂಸು; ಕರುಣದ ಕಂದಗಳು = ಕರುಣಾಪಾತ್ರರಾದ ಮಕ್ಕಳು; ತೊಟ್ಟಿಲ ಕೂಸು = ಎಳೆಗೂಸು; ತೊತ್ತಿನ ಮಕ್ಕಳು = ದಾಸಿಯ ಮಕ್ಕಳು; ನಾನು = ಶರಣ; ನೀ = ಶಿವನು, ಪರಶಿವನು; ಮುಂದಣ ಕವಿಗಳು = ಮುಂದಣ ತತ್ವ್ತವನ್ನು ಅರಿತವರು; ಹರಿಬ್ರಹ್ಮರು = ಬ್ರಹ್ಮ, ವಿಷ್ಣು, ರುದ್ರ, ಈಶ್ವರ, ಸದಾಶಿವ ಎಂಬೈದು ಪರಶಿವನ ಅಭಿವ್ಯಕ್ತರೂಪಗಳು, ಕ್ರಿಯಾ-ಜ್ಞಾನ-ಇಚ್ಚಾ-ಆದಿ-ಪರಾ ಎಂಬ ; ಹಿಂದಣ ಕವಿಗಳು = ಹಿಂದಣ ತತ್ವ್ತವನ್ನು ಅರಿತವರು; Written by: Sri Siddeswara Swamiji, Vijayapura