•  
  •  
  •  
  •  
Index   ವಚನ - 553    Search  
 
ಆಗಮ್ಯ ಅಗೋಚರನೆನಿಸಿಕೊಂಡು, ಅವರಿವರ ಕೈಗೆ ಎಂತು ಬಂದೆ? ಉಗುರುಗಳೆಲ್ಲ ಸುತ್ತಿದವೆ? ಅಗ್ಘವಣಿ ಪತ್ರೆ ಅರತವೆ ಅಯ್ಯಾ? ಎನ್ನ ಕರಸ್ಥಲದೊಳಗಿರ್ದು ಎನ್ನೊಡನೆ ನುಡಿಯೆ, ನಿನ್ನ ಹಲ್ಲ ಕಳೆದಡೆ ಒಡೆಯರುಂಟೆ ಗುಹೇಶ್ವರಾ?
Transliteration Āgamya agōcaranenisikoṇḍu, avarivara kaige entu bande? Ugurugaḷella suttidave? Agghavaṇi patre aratave ayyā? Enna karasthaladoḷagirdu ennoḍane nuḍiye, ninna halla kaḷedaḍe oḍeyaruṇṭe guhēśvarā?
Hindi Translation अगम्य, अगोचर कहलवा कर इनके उनके हाथ में कैसे आये ? नख सिकुड़ गये हैं क्या? अग्धवणि पत्र सूख गये हैं क्या? मेरे करस्थल में रहकर मुझसे न बोले तो! तुम्हारे दांत खींचे तो रक्षा करेगा कौन, गुहेश्वरा ? Translated by: Eswara Sharma M and Govindarao B N
Tamil Translation அறிவிற்கு, புலனிற்கு எட்டாத பக்தர்தம் கையிலே எங்ஙனம் வந்தனையோ? நகங்களைச் சுருட்டி திருமஞ்சனநீர், வில்வம் என்னுமிவற்றை எடுக்க இயலாதோ? என் கரத்தலத்தில் இருந்தவாறு என்னுடன் உரையாட மாட்டாயா? நான் உம்மைத் தண்டித்தால் உம்மைக் காப்பாற்றுவோருளரோ குஹேசுவரனே Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಗಮ್ಯನು = ಬುದ್ದಿಗೆ ನಿಲುಕದವನು; ಅಗೋಚರನು = ಇಂದ್ರಿಯಗಳಿಗೆ ಗೋಚರವಾಗದವನು; ಅಗ್ಘವಣಿ = ಅಭಿಷೇಕ ಜಲ; ಅರ = ಇಲ್ಲದಾಗು; ಅವರಿವರು = ಸಾಮಾನ್ಯ ಭಕ್ತರು; ಸುತ್ತು = ಸುರಳಿಯಾಗು; Written by: Sri Siddeswara Swamiji, Vijayapura