ಕಸ್ತೂರಿಯ ಮೃಗ ಬಂದು ಸುಳಿಯಿತ್ತಯ್ಯಾ,
ಸಕಲ ವಿಸ್ತಾರದ ರೂಹು ಬಂದು ನಿಂದಿತ್ತಯ್ಯಾ,
ಆವ ಗ್ರಹ ಬಂದು ಸೋಂಕಿತ್ತೆಂದರಿಯೆನಯ್ಯಾ
ಆವ ಗ್ರಹ ಬಂದು ಹಿಡಿಯಿತ್ತೆಂಬುದ ನಾನರಿಯೆನಯ್ಯಾ.
ಹೃದಯಕಮಲಮಧ್ಯದಲ್ಲಿ ಗುರುವನರಿದು ಪೂಜಿಸಿ,
ಗುರು ವಿಖ್ಯಾತನೆಂಬುದ ನಾನರಿದೆನಯ್ಯಾ.
ಗುಹೇಶ್ವರಲಿಂಗದಲ್ಲಿ, ಹಿಂದಣ ಹುಟ್ಟರತು ಹೋದುದ ಕಂಡೆನಯ್ಯಾ.
Transliteration Kastūriya mr̥ga bandu suḷiyittayyā,
sakala vistārada rūhu bandu nindittayyā,
āva graha bandu sōṅkittendariyenayyā
āva graha bandu hiḍiyittembuda nānariyenayyā.
Hr̥dayakamalamadhyadalli guruvanaridu pūjisi,
guru vikhyātanembuda nānaridenayyā.
Guhēśvaraliṅgadalli hindaṇa huṭṭaratu hōduda kaṇḍenayyā.
English Translation 2 A musk-deer has come
And roams about.
Infinitude Itself has come
And here stands still. What planet could have come
And struck me so?
I have seen the Great Master
In the heart's lotus heart;
I have adored him and known him
To be a Master of renown.
In Guheśvaralinga I have seen
All bygone births
Go off like vapour!
Hindi Translation कस्तूरी मृग आकर घूमा,
सकल विस्तार का रूहू आ खड़ा था;
कौनसा ग्रह आकर स्पर्श किया यह नहीं जानता।
कौनसा ग्रह ने आकर पकड़ लिया यह नहीं जानता।
हृदय कमल के बीच में गुरु को जानकर पूजा करने से
गुरु की महिमा जान ली।
गुहेश्वर लिंग के संपर्क से
पूर्व जन्म की वासना दूर हुई देखा।
Translated by: Eswara Sharma M and Govindarao B N
Tamil Translation கஸ்தூரிமான் வந்து நின்றது ஐயனே,
எங்கும் நிறைந்த வடிவம்வந்து நின்றது ஐயனே,
எந்த கிரகம் வந்து தாக்கியதென்று அறியேனையனே,
எந்த கிரகம் வந்து பீடித்தது என்று அறியேனையனே,
இதயகமலநடுவில் குருவை அறிந்து, பூஜித்து
குரு எங்கும் நிறைந்தவர் என்பதை நானறிந்தே னையனே,
குஹேசுவரலிங்கத்தில்
முற்பிறவியின் பிணைப்பு அகன்றதை அறிந்தேனையனே.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಸಕಲ ವಿಸ್ತಾರ = ಸಮಸ್ತ ದೃಶ್ಯಪ್ರಪಂಚ; ಶಕ್ತಿಯ ವೈವಿಧ್ಯಪೂರ್ಣ ಸೃಷ್ಟಿ; ಹಿಂದಣ ಹುಟ್ಟು = ಪೂರ್ವಜ್ಮನದ ವಾಸನೆ, ಪೂರ್ವಾಶ್ರಯದ ಭಾವನೆ, ಜೀವಾತ್ಮನ ಅಜ್ಞಾನಾವಸ್ಥೆಯಲ್ಲಿ ಬೆಳೆದು ನಿಂದ ಕಲ್ಪನೆಗಳು, ಒಂದು ಮಾತಿನಲ್; ಹೃದಯಕಮಲ = ಶಿಷ್ಯನ ಅಂತರಂಗ;
Written by: Sri Siddeswara Swamiji, Vijayapura