•  
  •  
  •  
  •  
Index   ವಚನ - 574    Search  
 
ಉಂಡೆಹೆನೆಂದೆಡೆ ಹಸಿವಿಲ್ಲ, ಕಂಡೆಹೆನೆಂದಡೆ ಪ್ರತಿಯಿಲ್ಲ. ನೋಡಿಹೆನೆಂದಡೆ ಉದಕದೊಳಗಣ ಜ್ಯೋತಿಯಂತಾದವು ಗುಹೇಶ್ವರಾ, ನಿಮ್ಮ ನಾಮವ ಹಿಡಿದು ಬಿಟ್ಟಡೆ ಭಂಗವಯ್ಯಾ.
Transliteration Uṇḍ'̔ehenendeḍe hasivilla, kaṇḍ'̔ehenendaḍe pratiyilla. Nōḍ'̔ihenendaḍe udakadoḷagaṇa jyōtiyantādavu guhēśvarā, nim'ma nāmava hiḍidu biṭṭaḍe bhaṅgavayyā.
Hindi Translation खाना चाहे तो भूख नहीं, देखना चाहे तो प्रति नहीं, देखा कहें तो उदक में छिवि छिपी ज्योति जैसी । गुहेश्वरा, तुम्हारा नाम पकड छोड़े तो भंग है। Translated by: Eswara Sharma M and Govindarao B N
Tamil Translation உண்ணவேண்டுமெனின் பசியில்லை கண்டேன்எனின் மாறுபட்டதன்று பார்த்தேனெனின் நீரிலுள்ள ஒளியனையது! குஹேசுவரனே, உன் சொரூபத்தை அறியின் பிறவி அழியும் ஐயனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಉಣ್ಣು = ಅನುಭವಿಸು; ಉದಕ = ಅಂತಃಕರಣ; ಕಾಣು = ಕಣ್ಣಿನ ಎದುರಿಟ್ಟು ನೋಡು; ಜ್ಯೋತಿ = ಅರಿವಿನ ಬೆಳಗು; ನಾಮ = ಸ್ವರೂಪ; ನೋಡು = ಮನವೆಂಬ ಕರಣವನ್ನು ಬಳಸಿ ಅರಿತುಕೊಳ್ಳು; ಪ್ರತಿ = ಭಿನ್ನರೂಪು; ಭಂಗ = ಭವದ ಭಂಗ, ನಾಶ; ಹಸಿವು = ಅನುಭವಿಸುವ ಬಯಕೆ; ಹಿಡಿದುಬಿಡು = ಪರಿಗ್ರಹಿಸು, ಅಪರೋಕ್ಷವಾಗಿ ತಿಳಿದುಕೊಳ್ಳು; Written by: Sri Siddeswara Swamiji, Vijayapura