ನಿರವಯ ನಿರ್ಗುಣ ನಿಃಶೂನ್ಯಲಿಂಗಕ್ಕೆ
ಶರಣರು ತಮ್ಮ ತಮ್ಮ ತನುಗುಣಾದಿಗಳ
ಅರ್ಪಿಸಿಹೆನೆಂಬುದೆ ಮಹಾಪಾಪ!
ಅವು ತಮ್ಮ ತನುವಿನಲ್ಲಿಪ್ಪುದೆ ಭಂಗ, ಅದೇ ಕರ್ಮ.
ಈ ಉಭಯ ನಾಸ್ತಿಯಾಗದ ಸುಳುಹು
ಮುಂದೆ ಕಾಡಿಹುದಯ್ಯಾ ಗುಹೇಶ್ವರಾ.
Transliteration Niravaya nirguṇa niḥśūn'yaliṅgakke
śaraṇaru tam'ma tam'ma tanuguṇādigaḷa
arpisihenembude mahāpāpa!
Avu tam'ma tanuvinallippude bhaṅga, adē karma.
Ī ubhaya nāstiyāgada suḷuhu
munde kāḍ'̔ihudayyā guhēśvarā.
Hindi Translation निरवय निर्गुण निःशून्य लिंग को
शरण अपने अपने तनुगुणादि
अर्पित किये कहना महा पाप ।
वे अपने शरीर में रहना ही भंग, वहीं कर्म ।
इन उभय नास्ति होने का चिह्न
आगे सतायेगा गुहेश्वरा ।
Translated by: Eswara Sharma M and Govindarao B N
Tamil Translation உறுப்பற்ற, குணமற்ற வயலான இலிங்கத்திற்கு
சரணர் தம உடல், இயல்புகள் போன்றவற்றை
அர்ப்பித்திருப்பதாகக் கூறுவது பெரிய பாவம்
அவை அவர் உடலிலிருப்பதே கேடு. அதே கர்மம்!
இவ்விரண்டும் அகலாது எனின் பிறகு அது
பிறவித்துன்பத்தை ஈயுமன்றோ குஹேசுவரனே
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅವು = ಆ ತನುಗುಣಾದಿಗಳು; ಈ ಉಭಯ = ಅರ್ಪಿಸುವೆನು ಎಂಬ ಭಾವ ಹಾಗೂ ನಾನು-ನನ್ನವು ಎಂಬ ಅಭಿಮಾನ; ಕರ್ಮ = ದುಃಖಕ್ಕೆ ಕಾರಣ; ಕಾಡು = ಭವದುಃಖವನ್ನು ಈಯು; ತನುಗುಣ = ತನು, ಕರಣಾದಿಗಳಲ್ಲಿರುವ ವಿವಿಧ ಗುಣಧರ್ಮಗಳು; ನಾಸ್ತಿಯಾಗು = ಇಲ್ಲದಾಗು; ನಿಃಶೂನ್ಯ = ಬರಿ ಬಯಲು; ನಿರವಯ(ನಿರವಯವ) = ಅವಯವರಹಿತ; ನಿರ್ಗುಣ = ಗುಣರಹಿತ; ಪಾಪ = ಪ್ರಮಾದ; ಭಂಗ = ಹಾನಿಕರ; ಸುಳುಹು = ಸುಳಿದಾಟ;
Written by: Sri Siddeswara Swamiji, Vijayapura