Index   ವಚನ - 579    Search  
 
ನೋಡಲಿಲ್ಲದ ಶೃಂಗಾರ, ಮಾತಾಡಲಿಲ್ಲದ ಶಬ್ದ ಹಾಡಲಿಲ್ಲದ ಸ್ವರ, ಬೇಡಲಿಲ್ಲದ ವರವ, ನೋಡಿರೆ ನಿರಾಳವ! ಬಾಡಲಿಲ್ಲದ ಸಸಿಯ ಬೆಳಸು ಕೂಡದೆ ಕೂಡಿತ್ತೊಂದು ಸೋಜಿಗವ ಕಂಡೆ ನಾನು. ಇಲ್ಲದ ಉಪಕಾರ ಮೆಲ್ಲದ ಸವಿಯಿಂದ ಸುಖಿಯಾದೆ ಗುಹೇಶ್ವರಾ.