ನೋಡಲಿಲ್ಲದ ಶೃಂಗಾರ, ಮಾತಾಡಲಿಲ್ಲದ ಶಬ್ದ
ಹಾಡಲಿಲ್ಲದ ಸ್ವರ, ಬೇಡಲಿಲ್ಲದ ವರವ,
ನೋಡಿರೆ ನಿರಾಳವ!
ಬಾಡಲಿಲ್ಲದ ಸಸಿಯ ಬೆಳಸು
ಕೂಡದೆ ಕೂಡಿತ್ತೊಂದು ಸೋಜಿಗವ ಕಂಡೆ ನಾನು.
ಇಲ್ಲದ ಉಪಕಾರ ಮೆಲ್ಲದ ಸವಿಯಿಂದ
ಸುಖಿಯಾದೆ ಗುಹೇಶ್ವರಾ.
Transliteration Nōḍalillada śr̥ṅgāra, mātāḍalillada śabda
hāḍalillada svara, bēḍalillada varava,
nōḍire nirāḷava!
Bāḍalillada sasiya beḷasu
kūḍade kūḍittondu sōjigava kaṇḍe nānu.
Illada upakāra mellada saviyinda
sukhiyāde guhēśvarā.
Hindi Translation बिना देखे शृंगार, बिना बोले शब्द,
बिना माँगे वर-देखिए निराला !
बिना मुरझाया सस्य का प्रकाश
बिना मिले मिले आश्चर्य देखा मैंने ।
बिना उपकार बिना चबाए स्वाद से सुखी हुआ गुहेश्वरा ।
Translated by: Eswara Sharma M and Govindarao B N
Tamil Translation காணவியலாத பேரழகு, விவரிக்கவியலா
அமைதியின்வடிவம், விரும்பி அடையவியலா சுயம்பு
தூய, அமைதி வடிவினைக் காண்மின்
தேயாத சந்திரனின் தண்ணொளி
நயவாது இணைந்ததொரு வியப்பை நான்கண்டேன்
இல்லாத உதவி சுவைக்காத சுவையினால்
இன்புற்றேன் குஹேசுவரனே
Translated by: Smt. Kalyani Venkataraman, Chennai
ಶಬ್ದಾರ್ಥಗಳು ಕೂಡದೆ = ಬಯಸಿ ಒಂದಾಗದೆ; ಕೂಡಿತ್ತು = ಆ ದಿವ್ಯ ವಸ್ತು ನನ್ನೊಳಗೆ ಕೂಡಿ ಒಂದಾಯಿತು; ನಿರಾಳ = ನಿರ್ಮಲ ಚೈತನ್ಯ, ಪರಿಶುದ್ದ, ಪರಶಿವ; ನೋಡಲಿಲ್ಲದ = ಭಿನ್ನವಿಟ್ಟು ನೋಡಲಿಕ್ಕಾಗದ; ಬೆಳಗು = ಪ್ರಕಾಶ; ಬೇಡಲಿಲ್ಲದ = ಬಯಸಿ ಕೇಳಲಿಲ್ಲದ; ಮಾತಾಡಲಿಲ್ಲದ = ಮಾತನಾಡಿ ಹೇಳಲಿಕ್ಕಾಗದ; ಮೆಲ್ಲು = ಇಂದ್ರಿಯಗಳಿಂದ ಸ್ಮರಿಸು; ವರವು = ಸ್ವಯಂಸಿದ್ದ ನಿಲವು; ಶಬ್ದ = ನಿಶ್ಯಬ್ದ ಸ್ವರೂಪ, ನಿಶ್ಯಬ್ದ ಬ್ರಹ್ಮ; ಶೃಂಗಾರ = ಸೌಂದರ್ಯ, ದಿವ್ಯರೂಪು; ಸವಿ = ಪರಮಾಮೃತ, ಸಮರಸಾನುಭವ; ಸಸಿ = ಶಶಿ, ಪ್ರಶಾಂತ;
Written by: Sri Siddeswara Swamiji, Vijayapura