•  
  •  
  •  
  •  
Index   ವಚನ - 580    Search  
 
ನಾನು ಸಜ್ಜೀವವೊ, ನೀನು ಸಜ್ಜೀವವೊ? ನಿನಗೆಯೂ ಎನಗೆಯೂ ಸಂಬಂಧವಯ್ಯಾ, ನಿನ್ನನೆಂತು ಪ್ರಾಣಲಿಂಗವೆಂದು ಪೂಜಿಸುವೆನಯ್ಯಾ? ಎನ್ನ ಪ್ರಸಾದವು ನಿನಗೆ, ನಿನ್ನ ಪ್ರಸಾದವು ಎನಗೆ. ಎನಗೆಯೂ ನಿನಗೆಯೂ ಏಕಪ್ರಸಾದ ಕಾಣಾ ಗುಹೇಶ್ವರಾ.
Transliteration Nānu sajjīvavo, nīnu sajjīvavo? Ninageyū enageyū sambandhavayyā, ninnanentu prāṇaliṅgavendu pūjisuvenayyā? Enna prasādavu ninage, ninna prasādavu enage. Enageyū ninageyū ēkaprasāda kāṇā guhēśvarā.
Hindi Translation क्या मैं सत्य हूँ ? क्या तुम सत्य हो? तेरे मेरे संबंध है। तुझे कैसे प्राणलिंग समझ पूजा करुँ? मेरा प्रसाद तुझे, तेरा प्रसाद मुझे। मुझे भी तुझे भी एक प्रसाद देखो गुहेश्वरा । Translated by: Eswara Sharma M and Govindarao B N
Tamil Translation நான் மெய்ப்பொருளா, நீ மெய்ப்பொருளா? உனக்கும், எனக்கும் தொடர்பு உள்ளதையனே உன்னை எப்படி பிராணலிங்க மென்று பூஜிப்பேன்? என்பிரசாதம் உனக்கு, உன் பிரசாதம் எனக்கு எனக்குமுனக்கும் ஒரே பிரசாதம் காணாய் குஹேசுவரனே Translated by: Smt. Kalyani Venkataraman, Chennai
ಶಬ್ದಾರ್ಥಗಳು ನಾನು = ಶರಣ, ಅನುಭವಿ; ನೀನು = ದೇವನು, ನಿಷ್ಕಲಲಿಂಗವು; ಪ್ರಸಾದ = ಅರ್ಪಿತಾನ್ನ, ಸ್ವೀಕರಿಸಬೇಕಾದ ಶುದ್ದ ಪವಿತ್ರ ಪದಾರ್ಥ, ಅನುಭವಿಸುವುದಕ್ಕೆ ಯೋಗ್ಯವಾದುದು; ಸಜ್ಜೀವ = ಸತ್ಯ, ಕಾಲಾತೀತ ಅಸ್ತಿತ್ವ; Written by: Sri Siddeswara Swamiji, Vijayapura