ಅರುವೆಯನು ಒಂದು ಒರಲೆ ಕೊಂಡಡೆ,
ಆಕಾಶವನು ಉಡು ಮೇಯಿತ್ತಲ್ಲಾ!
ಕತ್ತಲೆಯ ಬೆಳಗುವ ತಾನೆ ನುಂಗಿತ್ತಲ್ಲಾ!
ಗುಹೇಶ್ವರಾ ಸತ್ತವರು ಬದುಕಿದವರ ಹೊತ್ತರು!
Transliteration Aruveyanu ondu orale koṇḍaḍe,
ākāśavanu uḍu mēyittallā!
Kattaleya beḷaguva tāne nuṅgittallā!
Guhēśvarā sattavaru badukidavara hottaru!
Hindi Translation ज्ञान को एक दीमक खाये तो
आकाश को तारे घेर लिये !
अंधकार को प्रकाश खुद निगला ।
गुहेश्वरा, मरे हुए जीवित को ढोये।
Translated by: Eswara Sharma M and Govindarao B N
Tamil Translation அறுவையைச் செல்லரித்தது ஐயனே
ஆகாயத்தை நட்சத்திரம் மேய்ந்தது!
இருளையும் ஒளியையும் தானே விழுங்கியது
குஹேசுவரனே, மாண்டவர் வாழ்வோரைச் சுமந்தனர்.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅರುವೆ = ಆಚ್ಛಾದಕ ಬಟ್ಟೆ, ಜಗವನೆಲ್ಲ ಆವರಿಸಿದ ಮೋಹ-ಮಾಯೆ; ಆಕಾಶ = ನಾಮ-ರೂಪುಗಳಿಲ್ಲದ ಚಿದ್ಬಯಲು, ಪರಮಾತ್ಮ; ಉಡು = ನಕ್ಷತ್ರ, ವಿವೇಕಯುಕ್ತವಾದ ನಿರ್ಮಲ ಮತಿ; ಒರಲೆ = ಗೆದ್ದಲು, ವಿವೇಕ; ಕತ್ತಲೆ-ಬೆಳಗು = ಭಿನ್ನಜ್ಞಾನ; ಕೊಳ್ಳು = ತಿಂದುಹಾಕು, ಹರಿದುಹಾಕು; ತಾನು = ನಿರ್ಮಲಮತಿ, ಆ ಮತಿಯುಳ್ಳ ಶರಣನು; ನುಂಗು = ನಾಶಮಾಡು; ಬದುಕಿದವ = ಯಾವಾಗಲೂ ಇರುವವ, ಕಾಲಾತೀತವಾದ ಪರವಸ್ತು-ಪರಮಾತ್ಮ; ಮೇಯು = ಅವಗ್ರಹಿಸು, ಆಸ್ವಾದಿಸು; ಸತ್ತವರು = ಅನಾತ್ಮಭಾವ ಕಳೆದುಕೊಂಡ ಶರಣರು, ಸಾಯುವ ದೇಹಾದಿಗಳಲ್ಲಿ ಆತ್ಮಬುದ್ದಿ ತಾಳದ ಅಕಾಯರು; ಹೊರು = ಹೊತ್ತುಕೊಳ್ಳ-ತುಂಬಿಕೊಳ್ಳು;
Written by: Sri Siddeswara Swamiji, Vijayapura