ಅವಿರಳ ವಿಟನ ಮದುವೆಗೆ ನಿಬ್ಬಣಗಿತ್ತಿಯರೆಲ್ಲ ಬಂದು
ಕೆಂಡದ ದಂಡೆಯನೆ ಮುಡಿದು,
ಅಂಡಜವೆಂಬ ಅರಿಷಿಣವ ಮಿಂದು,
ಉರಿಯೆಂಬ ಹಚ್ಚಡದ ಹೊದಿಕೆಯಲ್ಲಿ-
ನಿಬ್ಬಣಗಿತ್ತಿಯರು ಬಪ್ಪ ಭರವ ಕಂಡು ನೀರಲಡಿಗೆಯ ಮಾಡಿ;
ವಾಯದ ಕೂಸಿಂಗೆ ಮಾಯದ ಮದವಣಿಗ,
ಸಂಗ ಸಂಯೋಗವಿಲ್ಲದೆ ಬಸುರಾಯಿತ್ತು.
ಕೂಸೆದ್ದು ಕುಣಿದಾಡಿ ಸೂಲಗಿತ್ತಿಯನವಗ್ರಹಿಸಿತ್ತು.
ಗುಹೇಶ್ವರಾ ಒಬ್ಬ ಇಬ್ಬ ಮೂವರು
ತ್ರಿದೇವತೆಗಳು ಬಲ್ಲರೆ ಆ ಲಿಂಗದ ಘನವನು?
Transliteration Aviraḷa viṭana maduvege nibbaṇagittiyarella bandu
keṇḍada daṇḍeyane muḍidu,
aṇḍajavemba ariṣiṇava mindu,
uriyemba haccaḍada hodikeyalli-
nibbaṇagittiyaru bappa bharava kaṇḍu nīralaḍigeya māḍi;
vāyada kūsiṅge māyada madavaṇiga,
saṅga sanyōgavillade basurāyittu.
Kūseddu kuṇidāḍi sūlagittiyanavagrahisittu.
Guhēśvarā obba ibba mūvaru
tridēvategaḷu ballare ā liṅgada ghanavanu?
Hindi Translation अखंड विट की शादी में बाराती स्त्रियाँ आयीं ।
लाल पुष्प माला गूँथकर
अंडज नाम हल्दी धारण कर,
आग का चादर ओडकर
बाराती स्त्रियाँ आती देख पानी में खाना पकाकर
वायु की वधू को माया का वर ;
बिना संग संयोग गर्भिणी बनी।
शिशु उठकर नाचते दाई को समा लिया।
गुहेश्वरा एक-दो-तीन-
क्या त्रिदेव जानते उस लिंग का महत्व ?
Translated by: Eswara Sharma M and Govindarao B N
Tamil Translation பேரின்ப மெய்ப்பொருளின் மணத்திற்கு
உறவினரனைவரும் வருகைபுரிந்து,
தணலெனும் பூச்சரத்தை முடித்து, இலிங்க
உணர்வெனும் மஞ்சனைப் பூசினர்.
இலிங்கதியானமெனும் போர்வையாம்,
உறவினர் விரைந்து வந்ததைக் கண்டு
தூயமனத்தில் சமைத்து வெட்டவெளி
சொரூப குழந்தைக்கு இலிங்கமே மணமகன்.
இணைதலின்றியே குழந்தை உருப்பெற்றது.
குழந்தை எழுந்து விளையாடி பேருணர்விற்குக்
காரணமான தியானத்தைத் தன்னுள்ளே
நிறைத்துக் கொண்டது, குஹேசுவரனே
ஒருவர், இருவர், மூவர் தேவர்களும்
அந்த இலிங்க மேன்மையை உணர்வரோ?
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಂಡಜವೆಂಬ ಅರಿಷಿಣ = ಲಿಂಗತದ್ಭಾವವೆಂಬ ಅರಿಷಿಣ; ಅಡಿಗೆ = ಸದ್ಭಾವ ರಸಪಾಕ; ಅವಗ್ರಹಿಸು = ತನ್ನೊಳಗೆ ಸಮಾಲೀನಗೊಳಿಸಿಕೊ.; ಅವಿರಳ = ಅಖಂಡ, ಚಿದ್ಘನ; ಉರಿಯೆಂಬ ಹಚ್ಚಡದ ಹೊದ = ಲಿಂಗತದ್ಧ್ಯಾನವೆಂಬ ಹೊದಿಕೆ; ಏಳು = ಉದಿಸು,; ಕೂಸು = ಮದುಮಗಳು, ಶರಣಸತಿ, ಶುದ್ದ ಅಂಗ; ಕೂಸು = ಐಕ್ಯಾನುಭೂತಿ, ಶಿವೋsಹಂ ಎಂಬ ಮಹಾಪ್ರಜ್ಞೆ; ಕೆಂಡದ ದಂಡೆ = ಲಿಂಗಜ್ಞಾನವೆಂಬ ಹೂದಂಡೆ; ನಿಬ್ಬಣಗಿತ್ತಿಯರು = ವಧು-ವರರ ಸಂಬಂಧಿಗಳು, ಅಂಗ ಹಾಗೂ ಲಿಂಗಗಳ ಸಂಬಂಧಿಗಳು, ಪಂಚವಿಧ ಭಕ್ತಿಗಳು; ನೀರು = ನಿರ್ಮಲಚಿತ್ತ; ಮದುವಣಿಗ = ಮದುಮಗ, ಚೈತನ್ಯಘನನಾದ ಲಿಂಗದೇವ; ಮಾಯ = ಬಯಲಸ್ವರೂಪ; ವಾಯ = ಅಜಡಸ್ವರೂಪ; ವಿಟ = ರಸಿಕ, ಆನಂದ ಘನ; ಸಂಗ = ಭೌತಿಕ ಸಂಬಂಧ; ಸೂಲಗಿತ್ತಿ = ಆ ಮಹಾಶಿವಪ್ರಜ್ಞೋದಯಕ್ಕೆ ಕಾರಣವಾದ ಅನುಸಂಧಾನವೆಂಬ ಕ್ರಿಯಾಶಕ್ತಿ;
Written by: Sri Siddeswara Swamiji, Vijayapura