ಸತ್ತಾತನೊಬ್ಬ ಹೊತ್ತಾತನೊಬ್ಬ,
ಈ ಇಬ್ಬರನೂ ಒಯ್ದು ಸುಟ್ಟಾತನೊಬ್ಬ.
ಮದವಣಿಗನಾರೊ? ಮದವಳಿಗೆ ಯಾರೊ?
ಮದುವೆಯ ನಡುವೆ ಮರಣವಡ್ಡಬಿದ್ದಿತ್ತು.
ಹಸೆಯಳಿಯದ ಮುನ್ನ ಮದವಣಿಗನಳಿದ.
ಗುಹೇಶ್ವರಾ-ನಿಮ್ಮ ಶರಣನೆಂದೂ ಅಳಿಯ.
Hindi Translationमरा एक, ढोया एक ;
इन दोनों को ले जाकर जलाया एक ।
वर कौन? वधु कौन ?
शादी के बीच मृत्यु आयी।
पहले वर मरा
गुहेश्वरलिंग कभी नहीं मरता।
Translated by: Eswara Sharma M and Govindarao B N
English Translation One dies,
another bears him to the burial ground:
still another takes them both
and burns them.
No one knows the groom
and no one the bride.
Death falls across
the wedding.
Much before the decorations fade
the bridegroom is dead.
Lord, only your men
have no death.
Translated by: A K Ramanujan Book Name: Speaking Of Siva Publisher: Penguin Books
---------------------
Tamil Translationஸத் வடிவினனொருவன், தரித்தவ னொருவன்,
இவர்களிருவரையும் அகற்றியவனொருவன்,
மணமகன் யார்? மணமகள் யார்?
திருமண வாழ்வு இறுதி எய்துகிறது.
முன்பு இருந்த அங்கம் அழிய
குஹேசுவரலிங்கம் நிலைத்த மெய்ப்பொருளாம்.
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಐಕ್ಯಸ್ಥಲ
ಶಬ್ದಾರ್ಥಗಳುಮದವಳಿಗ = ಸತಿಯಾದ ಶರಣ; ಮದುವಣಿಗ = ಲಿಂಗ; ಮದುವಳಿಗೆ = ಅಂಗ, ಶರಣ; ಮದುವೆ = ಮದುವೆಯ ಬಾಳು, ಶರಣನ ಲಿಂಗದೊಂದಿಗಿನ ವೈವಾಹಿಕ ಜೀವನ; ಮರಣ = ಅಂಗ-ಲಿಂಗವೆಂಬ ದ್ವೈತಭಾವದ ನಾಶ, ಸತಿ-ಪತಿ ಎಂಬ ದ್ವಂದ್ವಮತಿಯ ಕೊನೆ; ಮುನ್ನ = ಮೊದಲು; ಲಿಂಗ = ಘನಲಿಂಗ, ನಿಃಕಲಲಿಂಗ; ಸತ್ತಾತನು = ಸತ್ ರೂಪನಾದ ಆತನು, ಲಿಂಗವು; ಸುಟ್ಟಾತನು = ಅಂಗ-ಲಿಂಗ ಎಂಬ ಎರಡೂ ಭಾವನೆಗಳನ್ನು ನಷ್ಟಗೊಳಿಸಿದವನು, ಅವಿನಾಭಾವ ಪ್ರಜ್ಞೆ; ಹೊತ್ತಾತನು = ಆ ಲಿಂಗವನ್ನು ಭಾವದಲ್ಲಿ ಧರಸಿದವನು, ಶರಣನು, ಅಂಗನು; Written by: Sri Siddeswara Swamiji, Vijayapura