ಬಯಲು ಬಯಲನೆ ಬಿತ್ತಿ ಬಯಲು ಬಯಲನೆ ಬೆಳೆದು
ಬಯಲು ಬಯಲಾಗಿ ಬಯಲಾಯಿತ್ತಯ್ಯಾ.
ಬಯಲ ಜೀವನ ಬಯಲ ಭಾವನೆ,
ಬಯಲು ಬಯಲಾಗಿ ಬಯಲಾಯಿತ್ತಯ್ಯಾ.
ನಿಮ್ಮ ಪೂಜಿಸಿದವರು ಮುನ್ನವೆ ಬಯಲಾದರು
ನಾ ನಿಮ್ಮ ಪೂಜಿಸಿ ಬಯಲಾದೆ ಗುಹೇಶ್ವರಾ.
Art
Manuscript
Music Courtesy:Vachana Sangama - Shiva Sharanara Vachanagalu - Part 4, Singer: Parameshwar Hegde • H.K. Narayana • N.S. Prasad ℗ Lahari Recording Company Released on: 2014-08-01
Hindi Translationशून्य शून्य को बोकर, शून्य शून्य को बडा कर,
शून्य शून्य होकर शून्य हुआ।
शून्य जीवन, शून्य भावना;
शून्य शून्य होकर शून्य हुआ।
तुम्हें पूजाकर पहले ही शून्य हुए।
मैं तुम पर विश्वास कर शून्य हुआ गुहेश्वरा।
Translated by: Eswara Sharma M and Govindarao B N
English Translation
Tamil Translationவயல் வயலையே விதைத்து, வயலையே விளைவித்து,
வயல் வயலாகி வயலாயிற்றன்றோ!
வயல் வாழ்வு, வயல் உணர்வு,
வயல வயலாகி வயலாயிற்றன்றோ!
உம்மைப் பூஜித்தவர் முன்பே வயலாயினர்,
நான் உம்மை நம்பி வயலானேன் குஹேசுவரனே.
Translated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಐಕ್ಯಸ್ಥಲ
ಶಬ್ದಾರ್ಥಗಳುನಂಬು = ಆ ಬಯಲೇ ತಾನೆಂದು ಪರಿಭಾವಿಸು; ಪೂಜಿಸು = ಅರಿತು ಅನುಸಂಧಾನಿಸಿ ಬಯಲಿನೊಳು ಬೆರೆತುಹೋಗು; ಬಯಲು ಬಯಲು = ಬರಿ ಬಟ್ಟಬಯಲು; ಬಿತ್ತು = ಆ ಬಯಲಿನ ಜ್ಞಾನವನ್ನು ಶಿಷ್ಯನಿಗೆ ಕರುಣಿಸು; ಬೆಳೆ = ಸಾಧನೆಯ ಮೂಲಕ ವಿಕಾಸಗೊಳಿಸಿಕೊಳ್ಳು; Written by: Sri Siddeswara Swamiji, Vijayapura