ಅಕ್ಷರದಲಭ್ಯಾಸವ ಮಾಡಿ ಬರೆವ ತೊಡೆವ ಪರಿಯಿನ್ನೆಂತೊ?
ಸ್ವರೂಪವೆಂಬುದಾವುದು ನಿರೂಪವೆಂಬುದಾವುದು ಅರಿಯರಾಗಿ,
ಆದಿನಿರಾಳ ಮಧ್ಯನಿರಾಳ ಊರ್ದ್ವನಿರಾಳ ಗುಹೇಶ್ವರಾ.
Transliteration Akṣaradalabhyāsava māḍi bareva toḍeva pariyinnento?
Svarūpavembudāvudu nirūpavembudāvudu ariyarāgi,
ādinirāḷa madhyanirāḷa ūrdvanirāḷa guhēśvarā.
Hindi Translation अक्षराभ्यास कर लिखावट नाश करने की रीति कैसी ?
स्वरूप कैसा, निरूप कैसा न जानते,
आदि निराल, मध्य निराल, ऊर्ध्व निराल गुहेश्वरा।
Translated by: Eswara Sharma M and Govindarao B N
Tamil Translation சொற்களால் பயின்று தலை எழுத்தைத் துடைக்கவியலுமோ?
ஆன்ம சொரூபம் எது, பரம்பொருள் எது என அறியார்
முதலில் ஞானம், இடை, கடையில் ஞானம் குஹேசுவரன்.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಕ್ಷರದಲ್ಲಿ = ಶಾಬ್ದಿಕವಾಗಿ; ಅಭ್ಯಾಸ = ಶಾಸ್ತ್ರಾಭ್ಯಾಸ; ತೊಡೆ = ಅಳಿಸಿಹಾಕು, ಇಲ್ಲದಾಗಿಸು; ನಿರಾಳ = ವಿಶುದ್ದ ಚೇತನ, ಏನೂ ಏನೂ ಮಿಸುಕದ ಚಿದ್ಭಯಲು; ನಿರೂಪು = ಯಾವುದೇ ಪರಿಮಿತಿಗೆ ಒಳಗಾಗದ ಪರವಸ್ತು, ಪರಮಾತ್ಮ; ಬರೆಹ = ಜನ್ಮ-ಮರಣರೂಪ ಭವಬಂಧನ; ಸ್ವರೂಪು = ಜೀವಾತ್ಮನ ನಿಜವಾದ ರೂಪು;
Written by: Sri Siddeswara Swamiji, Vijayapura