ವಸ್ತುಕ ವರ್ಣಕ ಭೂತಿಕ ತ್ರಿಸ್ಥಾನದ ಮೇಲೆ ನುಡಿವ ನುಡಿಗಳು
ಇತ್ತಿತ್ತಲಲ್ಲದೆ ಅತ್ತತ್ತಲಾರು ಬಲ್ಲರು. ಇವರೆತ್ತಲೆಂದರಿಯರು.
ಗಿಳಿವಿಂಡುಗೆಡೆವರು ನಿಮ್ಮನೆತ್ತ ಬಲ್ಲರು ಗುಹೇಶ್ವರಾ?
Transliteration Vastuka varṇaka bhūtika tristhānada mēle nuḍiva nuḍigaḷu
ittittalallade attattalāru ballaru. Ivarettalendariyaru.
Giḷiviṇḍugeḍevaru nim'manetta ballaru guhēśvarā?
Hindi Translation वस्तुक, वर्णक त्रिस्थान पर बोली
इधर इधर नहीं, उधर उधर कौन जानते ?
ये कहाँ के नहीं जानते।
तोते जैसे बोलनेवाले तुम्हें क्या जानते गुहेश्वरा ?
Translated by: Eswara Sharma M and Govindarao B N
Tamil Translation “வஸ்துக வர்ணகத்தை” மூன்று நிலைகளில்
கூறும் சொற்கள், இப்பக்கமின்றி
அப்பக்கமிருப்பதை எவர் உணர்வர்?
எங்குள்ளது என்பதை அறியார்
கிளியனைப் பேசுவோர் உம்மை உணர்வரோ குஹேசுவரனே?
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅತ್ತತ್ತಲು = ದೃಶ್ಯ ವಿಶ್ವದಾಚೆ; ಇತ್ತಿತ್ತಲು = ಈ ಕಡೆಯಲ್ಲಿ, ದೃಶ್ಯ ವಿಶ್ವದೊಳಗೆ ; ಎತ್ತಲೆಂದು = ಎಲ್ಲಿದೆ ಎಂಬುದನ್ನು ; ಗಿಳಿವಿಂಡುಗೆಡೆ = ಗಿಳಿಗಳಂತೆ ಅರ್ಥವರಿಯದೆ ಮಾತನಾಡು; ತ್ರಿಸ್ಥಾನ = ಉದಾತ್ತ, ಅನುದಾತ್ತ ಮತ್ತು ಸ್ವರಿತ ಎಂಬ ಮೂರು ಸ್ಥಾನ; ವರ್ಣಕ = ವರ್ಣನಾಪ್ರಧಾನವಾದ ಮಂತ್ರ; ವಸ್ತುಕ = ವಸ್ತುಪ್ರಧಾನವಾದ ಮಂತ್ರ;
Written by: Sri Siddeswara Swamiji, Vijayapura