•  
  •  
  •  
  •  
Index   ವಚನ - 643    Search  
 
ಕೈಯಲ್ಲಿ ಕರಸ್ಥಲ, ಮನದಲ್ಲಿ ಪರಸ್ಥಲ, ತನುವೆಲ್ಲ ಹುಸಿಸ್ಥಲ, ಶರಣನೆಂತೆಂಬೆ? ಮಾತಿನಂತುಟಲ್ಲ ಕ್ರಿಯಾಗಮಸ್ಥಲ. ಉತ್ಪತ್ತಿಸ್ಥಿತಿ ಲಯರಹಿತ ನಿಜಸ್ಥಲ, ಗುಹೇಶ್ವರನೆಂಬ ಲಿಂಗೈಕ್ಯವೈಕ್ಯ.
Transliteration Kaiyalli karasthala, manadalli parasthala, tanuvella husisthala, śaraṇanentembe? Mātinantuṭalla kriyākriyāgama sthala. Utpatya sthiti layarahita nijasthala, guhēśvaranemba liṅgaikyavaikya. Hand in hand, good in hand, Is he a surrogate, surrender? Verbally active. State of origin Guheshwaran. Open in Google Translate • Feedback
Hindi Translation हाथ में करस्थल, मन में परस्थल, सारा शरीर झूठा स्थल, शरण कैसे कहूँ ? बोली सम चाल नहीं क्रियागम स्थल ! उत्पत्ति-स्थिति–लय रहित निजस्थल। गुहेश्वर कहना लिंगैक्य वैक्य। Translated by: Eswara Sharma M and Govindarao B N
Tamil Translation கையில் கரத்தலம், மனதில் பரத்தலம், உடலெலாம் பொய்த் தலம், சரணனென எப்படிக் கூறுவேன்? சொற்களால் விவரிக்கவியலா “கிரியாகமத்தலம்” தோற்றம், இருப்பு, ஒடுக்கமற்ற உண்மைத்தலம், குஹேசுவரனெனும் இலிங்கத்திலிணைந்த நிலையாம். Translated by: Smt. Kalyani Venkataraman, Chennai
ಶಬ್ದಾರ್ಥಗಳು ಕರಸ್ಥಲ = ಕರದೊಳಗಿರುವ :ಸ್ಥಲ" ಕ್ರಿಯಾಲಿಂಗ; ಕ್ರಿಯಾಗಮಸ್ಥಲ = ಕ್ರಿಯಾಲಿಂಗವಿಡಿದು ಚಿದ್ಘನ ಮಹಾಲಿಂಗವನ್ನು ಅರಿತು ಬೆರೆಯುವ ಸಾಧನೆ-ಸಿದ್ದಿ; ನಿಜಸ್ಥಲ = ನಿಜದೊಳಗೆ ಬೆರೆದುನಿಂದ ಸ್ಥಲ, ಬಾಹ್ಯಾಂತರ ಭೇದವಡಗಿದ ನಿಸ್ಸೀಮ ಚಿದ್ಬಯಲು; ಪರಸ್ಥಲ = ಪರವಸ್ತು, ಚಿದ್ಘನಲಿಂಗ; ಮಾತಿನಂತುಟು = ಮಾತಿಗೆ ಒಳಗಾಗಿವಷ್ಟು; ಹುಸಿಸ್ಥಲ = (ತನುಭಾವ) ಅಡಗಿದ ಸ್ಥಲ; Written by: Sri Siddeswara Swamiji, Vijayapura