•  
  •  
  •  
  •  
Index   ವಚನ - 644    Search  
 
ತೋರಿದ ಭೇದವ ತೋರಿದಂತೆ ಕಂಡಾತನಲ್ಲದೆ, ದ್ಯಷ್ಟಿವಾಳಕ ತಾನಲ್ಲ. ಬೇರೊಂದ ವಿವರಿಸಿಹೆನೆಂದಡೆ, ಆರ ಮೀರಿದಲ್ಲದೆ ಅರಿಯಬಾರದು. ಅರಿವನರಿದು ಮರಹ ಮರೆಯದೆ, ಮನದ ಬೆಳಗಿನೊಳಗಣ ಪರಿಯನರಿಯದೆ ವಾದಿಸಿ ಕೆಟ್ಟು ಹೋದರು ಗುಹೇಶ್ವರಾ, ಸಲೆ ಕೊಂಡ ಮಾರಿಂಗೆ!
Transliteration Tōrida bhēdava tōridante kaṇḍātanallade, dyaṣṭivāḷaka tānalla. Bēronda vivarisihenendaḍe, āra mīridallade ariyabāradu. Arivanaridu maraha mareyade, manada beḷaginoḷagaṇa pariyanariyade vādisi keṭṭu hōdaru guhēśvarā, sale koṇḍa māriṅge!
Hindi Translation दिखाये भेद को दिखाने जैसे देखा दृष्टिवाळक मैं नहीं। और एक विवरण दे तो षट्स्थल पार किये बिना पार कर जानना नहीं। ज्ञान जानकर भूल न भूलकर मन के प्रकाश की रीति न जाने वादाकरकेबिगडगये, गुहेश्वरा, मारी को आह्वान दिये जैसे। Translated by: Eswara Sharma M and Govindarao B N
Tamil Translation தோன்றிய பேதத்தைத் தோன்றியவாறே கண்டவனன்றி கண்டவன் தானல்ல, மற்றொன்றை அறியவிரும்பின் ஆறை மீறினாலன்றி அறியவியலுமோ? அறிவை அறிந்து மறதியை மறக்காது, மனத்திலொளிரும் சொரூபத்தையறியாது, வாதிட்டுக் கெட்டனரன்றோ, குஹேசுவரனே, யமனை நாமே அழைத்த தனையதாம். Translated by: Smt. Kalyani Venkataraman, Chennai
ಶಬ್ದಾರ್ಥಗಳು ಆರ ಮೀರು = ಷಟ್ ಸ್ಥಲಗಳನ್ನು ಏರಿ ನಿಲ್ಲು; ತೋರಿದ ಭೇದ = ತೋರುವ ಜಗತ್ತಿಗಿಂತ ಭಿನ್ನವಾದ ಪರಮಾತ್ಮ; ತೋರಿದಂತೆ = ಯಥಾವತ್ತಾಗಿ; ದೃಷ್ಟಿವಾಳಕ = ದರ್ಶನ ಪಡೆದವ, ಕಂಡವ; ಬೇರೊಂದು = ದೃಶ್ಯವಾದ ಎಲ್ಲದರಿಂದಲೂ ಬೇರಾಗಿ ಇರುವ, ಹೊಳೆವ ಪರಮ ಆತ್ಮವಸ್ತು; ವಿವರಿಸು = ಪೂರ್ಣವಾಗಿ ಅರಿತುಕೊ; Written by: Sri Siddeswara Swamiji, Vijayapura