ವಚನ - 651     
 
ಅರಸಲಿಲ್ಲದ ಘನವ ಅರಸುವದದೇನೊ? ತಿಳಿವುದದೇನೊ? ತಿಳುಹಿನ ಮುಂದಣ ಸುಳುಹು ತಾನೇನೊ? ಸರದ ಸಮತೆಯ ಪರಿಣಾಮವ ನೋಡಾ! ಗುಹೇಶ್ವರನೆಂಬುದು ಅದೆ ಕಂಡಾ!