ಉಪಮೆ ಉಪಮಿಸಲರಿಯದೆ ಉಪಮಾತೀತವೆನುತ್ತಿದ್ದಿತ್ತು.
ಅರಿವು, ಅರಿವಿನ ಮರೆಯಲ್ಲಿರ್ದುದನರಿಯಲರಿಯದೆ,
ಅರಿವು ಪರಾಪರವೆಂದು ನುಡಿಯುತ್ತಿದ್ದಿತ್ತು.
ಧ್ಯಾನ ಧ್ಯಾನಿಸಲರಿಯದೆ, ಧ್ಯಾನರೂಪಾತೀತನೆಂದು,
ತದ್ದ್ಯಾನಗೊಂಡಿತ್ತು.
ಜ್ಞಾತೃ ಜ್ಞಾನ ಜ್ಞೇಯಕ್ಕೆ ಇನ್ನಾವ ಜ್ಞಾನವೊ?
ವೇದವಿಜ್ಞಾನವೆಂದುದಾಗಿ, `ತತ್ತ್ವಮಸಿ' ವಾಕ್ಯದರ್ಥವೆಲ್ಲವೂ
ಹುಸಿಯಾಗಿ ಹೋದವು.
ಸಚ್ಚಿದಾನಂದವೆಂದುದಾಗಿ ದ್ವೈತಾದ್ವೈತಿಬ್ರಹ್ಮವಾದಿಗಳೆಲ್ಲರೂ
ಸಂಹಾರವಾಗಿ ಹೋದರು.
ಬಂದೂ ಬಾರದ, ನಿಂದ ನಿರಾಳ ಗುಹೇಶ್ವರ.
Transliteration Upame upamisalariyade upamātītavenuttiddittu.
Arivu, arivina mareyallirdudanariyalariyade,
arivu parāparavendu nuḍiyuttiddittu.
Dhyāna dhyānisalariyade, dhyānarūpātītanendu,
taddyānagoṇḍittu.
Jñātr̥ jñāna jñēyakke innāva jñānavo?
Vēdavijñānavendudāgi, `tattvamasi' vākyadarthavellavū
husiyāgi hōdavu.
Saccidānandavendudāgi dvaitādvaitibrahmavādigaḷellarū
sanhāravāgi hōdaru.
Bandū bārada, ninda nirāḷa guhēśvara.
Hindi Translation उपमा उपमा करना न जानने से
उपमातीत कहलाता था ।
ज्ञान ज्ञान की आड में रहा न समझने से , न समझने से
ज्ञान परापर कहलाता था ।
ध्यान ध्यान करना न जानने से
ध्यान रूपातीत कहते तद्यान हुआ था ।
ज्ञातृ ज्ञान ज्ञेय को और क्या ज्ञान ?
वेद विज्ञान कहकर ,
'तत्वमसि'वाक्य झूठ बन गये ।
सच्चिदानंद कहने
द्वैताद्वैति सब संहार हो गये ।
आकर न आये स्थित निराला गुहेश्वरा ।
Translated by: Eswara Sharma M and Govindarao B N
Tamil Translation உவமை, உவமிக்கவியலாது உவமைக்கு
அப்பாற்பட்டவன் என்றது.
அறிவு, அறிவின்பின் இருந்ததை அறியவியலாது,
அறிவு பராபரம் என்றது.
தியானம், தியானிக்கவியலாது, தியானத்திற்கு
அப்பாற் பட்டவனென அடங்கியது.
அறிபவன் அறிவு அறியப்படும் பொருளிற்கு
இன்னும் எது ஞானமோ?
வேதம் விஞ்ஞானமென்பதால் “தஸ்வமஸி”
வாக்கியங்கள் பொய்த்துப் போயின.
சச்சிதானந்தம் என்பதால் துவைத, அத்துவைதமெலாம்
இல்லாம்மற் போயின.
உணரவியலும் எனக் கருதினும் உணரவியலா
வெட்டவெளியாம் குஹேசுவரனே.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅರಿವು = ಮಹಾ ಅರಿವು; ಅರಿವು = ವೃತ್ಯಾತ್ಮಕ ಅರಿವು; ಜ್ಞಾತೃ = ಜಾನಿಸುವವ; ಜ್ಞಾನ = ಜ್ಞೇಯವಸ್ತುವಿನ ಅರಿವು; ಜ್ಞೇಯ = ಜ್ಞಾನಕ್ಕೆ ವಿಷಯವಾದುದು; ತತ್ವ್ತಮಸಿ : ತತ್ ತ್ = ಅದು ನೀನು ಇರುವಿ, ಆ ಪರಮಾತ್ಮನೆ ಪ್ರತ್ಯಾಗಾತ್ಮನಾದ ನೀನು ಇರುವಿ; ತದ್ದ್ಯಾನಗೊಳ್ಳು = ಉಪರಮಗೊಳ್ಳು, ಅಡಗು; ದ್ವೈತಾದ್ವೈತಿಗಳು = ಜೀವ-ಪರಮರು ಬೇರೆ ಬೇರೆ ಎಂದು ಹೇಳುವವರು ದ್ವೈತಿಗಳು, ಜೀವ-ಪರಮರು ಒಂದು ಎಂದು ಹೇಳುವವರು ಅದ್ವೈತಿಗಳು; ಧ್ಯಾನ = ನಿಶ್ಚಲ ಮನೋವೃತ್ತಿ; ನಿರಾಳ = ನಿರ್ಬಯಲು; ಪರಾಪರ = ಪರಾತ್ ಪರ, ಪರಕ್ಕೂ ಪರ, ಎಲ್ಲದರ ಆಚೆ; ಬಂದೂ ಬಾರದ = ಭಾವಕ್ಕೆ ಬಂದಿತು ಎಂದೆನಿಸಿದರೂ ಭಾವಕ್ಕೆ ಬರದು-ಅಂಥ; ವಿಜ್ಞಾನ = ಸಾಕ್ಷಾತ್ ಅಪರೋಕ್ಷ ಜ್ಞಾನ; ವೇದ = ಋಷಿವಚನ, ಸತ್ಯದರ್ಶಿಗಳ ನುಡಿ; ಸಚ್ಚಿದಾನಂದ = ಸತ್ತು, ಚಿತ್ತು ಹಾಗೂ ಆನಂದ; ಅಸ್ತಿತ್ವ, ಅರಿವು ಹಾಗೂ ಆನಂದ; ಹುಸಿಯಾಗಿ ಹೋಗು = ನಿಷ್ಫಲವಾಗು;
Written by: Sri Siddeswara Swamiji, Vijayapura